ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯ ಬಂಧನ

ಕೊಪ್ಪಳ: ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ, ವಂಚಿಸುತ್ತಿದ್ದ ಕಿಲಾಡಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಜೈಭೀಮ್ ಪಡಕೋಟಿ ಎಂದು ಗುರುತಿಸಲಾಗಿದೆ.
ಕನ್ಯೆ, ವರಾನ್ವೇಷಣೆಗೆ ಇರುವ ಮ್ಯಾಟ್ರಿಮೋನಿ ವೆಬ್‌ಸೈಟ್ ಕೂಡ ಈಗ ವಂಚಕರಿಗೆ ವೇದಿಕೆ ಆಗಿದೆ. ಮ್ಯಾಟ್ರಿಮೋನಿಯಲ್ಲಿ ಪರಿಚಯಿಸಿಕೊಂಡು ಮದುವೆ ಆಗುವುದು. ನಂತರ ಯುವತಿ ಕುಟುಂಬದವರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಹಣ ಪೀಕಿ, ಕ್ಯಾನಿನೋದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಕೊಪ್ಪಳ ಜಿಲ್ಲೆಯ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ, ಪೊಲೀಸರು ವಂಚಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತನಿಗೆ ಮ್ಯಾಟ್ರಿಮೋನಿ ಆದಾಯದ ಮೂಲ. ಕ್ಯಾಸಿನೋ ಹಣ ಬಳಕೆಯ ವೇದಿಕೆ ಎಂಬ ವಿಷಯ ಬೆಳಕಿಗೆ ಬಂದಿದೆ. ಜೈಭೀಮ್ ವಿರುದ್ದ ರಾಜ್ಯದ 9 ಠಾಣೆಯಲ್ಲಿ ಕೊಲೆ ಸೇರಿ ಮಹಿಳೆಯರಿಗೆ ವಂಚಿಸಿದ 11 ಪ್ರಕರಣ ದಾಖಲಾಗಿವೆ.