ಕಾಸರಗೋಡು: ಉಪ್ಪಳದಲ್ಲಿ ಕೊಲೆ ಪ್ರಕರಣ: ಆರೋಪಿಯ ಬಂಧನ
ಕಾಸರಗೋಡು: ಉಪ್ಪಳದಲ್ಲಿ ಕಾವಲುಗಾರನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಪ್ಪಳ ಪತ್ವಾಡಿಯ ಸವಾದ್ (23) ಬಂಧಿತ ಆರೋಪಿ. ಪಯ್ಯನ್ನೂರಿನ ಸುರೇಶ್ (49) ರನ್ನು ಕೊಲೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.
ಸವಾದ್ ಆಂಬ್ಯುಲೆನ್ಸ್ ಕಳವು ಸೇರಿದಂತೆ ಮೂರಕ್ಕೂ ಅಧಿಕ ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಉಪ್ಪಳ ಪೇಟೆಯಲ್ಲಿ ಕೊಲೆ ನಡೆದಿತ್ತು. ಕ್ಷುಲ್ಲಕ ಕಾರಣಕ್ಕೆ ಜಗಳ ವಿಕೋಪಕ್ಕೆ ತಿರುಗಿ ಕೊಲೆ ಯಲ್ಲಿ ಕೊನೆ ಗೊಂಡಿತ್ತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





