March 11, 2026

ಉಡುಪಿ: ಬಸ್ ಚಾಲಕನಿಗೆ ಹಠಾತ್ ಎದೆ ನೋವು: ಹೆದ್ದಾರಿ ಪಕ್ಕದ ಇಳಿಜಾರಿಗೆ ಇಳಿದು ನಿಂತ ಬಸ್

0
image_editor_output_image-436023713-1739344133405.jpg

ಉಡುಪಿ : ಬಸ್ ಚಾಲಕನಿಗೆ ಡ್ರೈವಿಂಗ್ ವೇಳೆ ಹಠಾತ್ ಎದೆ ನೋವು ಕಾಣಿಸಿಕೊಂಡ ಪರಿಣಾಮ ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗೆ ಇಳಿದು ನಿಂತ ಘಟನೆ ಸಂಭವಿಸಿದೆ.

ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯತ್ತ ಹೋಗುತ್ತಿದ್ದ ಎಕ್ಸ್ ಪ್ರೇಸ್ ಬಸ್ ನ ಚಾಲಕ ಶಂಭು ಎಂಬವರಿಗೆ ಎದೆನೋವು ಕಾಣಿಸಿಕೊಂಡಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಸೀದಾ ರಸ್ತೆ ಬದಿಯ ಇಳಿಜಾರಿಗೆ ಇಳಿದು ನಿಂತಿದೆ. ಕೂಡಲೇ ಬಸ್ ಚಾಲಕ ಹಾಗೂ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ರಸ್ತೆ ಬದಿ ಹೋದ ಕಾರಣ ದೊಡ್ಡ ಅಪಘಾತವೊಂದು ತಪ್ಪಿದೆ.

Leave a Reply

Your email address will not be published. Required fields are marked *

error: Content is protected !!