March 11, 2026

ಬಂಟ್ವಾಳ: ಡ್ರೈವಿಂಗ್ ವೇಳೆ ಲಾರಿ ಚಾಲಕನಿಗೆ ಮೂರ್ಛೆ ರೋಗ: ಡಿವೈಡರ್ಗೆ ಢಿಕ್ಕಿ ಹೊಡೆದ ಲಾರಿ

0
image_editor_output_image-477654981-1739344026293.jpg

ಬಂಟ್ವಾಳ: ಡ್ರೈವಿಂಗ್ ವೇಳೆ ಚಾಲಕನಿಗೆ ಮೂರ್ಛೆ ರೋಗ ಬಂದ ಪರಿಣಾಮ ಲಾರಿ ಡಿವೈಡರ್ ಹತ್ತಿ ನಿಂತ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ರ ತುಂಬೆ ಸಮೀಪ ನಡೆದಿದೆ,

ಲಾರಿ ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿತ್ತು ಎಂದು ಹೇಳಲಾಗಿದ್ದು. ಡ್ರೈವಿಂಗ್ ವೇಳೆ ಚಾಲಕನಿಗೆ ಮೂರ್ಛೆ ರೋಗ ಬಂದಿದೆ. ಈ ವೇಳೆ ಲಾರಿ ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು, ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಡಿವೈಡರ್ ಮೇಲೆ ಅಳವಡಿಸಿದ್ದ ರಸ್ತೆ ಸೂಚನಾ ಫಲಕಕ್ಕೆ ಹಾನಿಯಾಗಿರುವುದು ಬಿಟ್ಟರೆ ಉಳಿದಂತೆ ಯಾವುದೇ ಹಾನಿ ಉಂಟಾಗಿಲ್ಲ.

Leave a Reply

Your email address will not be published. Required fields are marked *

error: Content is protected !!