March 11, 2026

ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿಯ ನವೀಕೃತ ಆಡಳಿತ ಕಛೇರಿಯ ಉದ್ಘಾಟನೆ

0
image_editor_output_image1512808319-1739254701618.jpg

ಬಂಟ್ವಾಳ : ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ನವೀಕೃತ ಆಡಳಿತ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ನೂತನ ಕಛೇರಿಯನ್ನು ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಲ್ಲಡ್ಕ ಜುಮಾ ಮಸೀದಿ ಖತೀಬರಾದ ಉಸ್ಮಾನ್ ದಾರಿಮಿ, ಮುಜವ್ವಿದರಾದ ರಿಯಾಝ್ ಮೌಲವಿ ಕಾಸರಗೋಡು ಭಾಗವಹಿಸಿದ್ದರು.

ಅಬೂಬಕ್ಕರ್ ಸಿದ್ದೀಕ್ ಪನಾಮ ಪ್ರಾಸ್ತಾವಿಕವಾಗಿ ಮಾತನಾಡಿದರು, ಮುನೀರುಲ್ ಇಸ್ಲಾಂ ಮದ್ರಸ ಕಲ್ಲಡ್ಕ ಇದರ ಸದರ್ ಉಸ್ತಾದ ಅಬ್ದುಲ್ ಲತೀಫ್ ದಾರಿಮಿ ಕಾರ್ಯಕ್ರಮವನ್ನು ನಿರೂಪಿಸಿದರು.

.

Leave a Reply

Your email address will not be published. Required fields are marked *

error: Content is protected !!