March 18, 2026

ಕಂಬಳಬೆಟ್ಟು ನವೀಕೃತ ಮುಹಿಯುದ್ದೀನ್ ಮಸೀದಿ ಉದ್ಘಾಟನೆ: ಆರಾಧನೆ ಮೂಲಕ ಮಸೀದಿಯನ್ನು ಅಲಂಕರಿಸಿ: ಕುಂಬೋಳ್ ತಂಙಳ್

0
image_editor_output_image-1303242226-1739090903903

ವಿಟ್ಲ: ಕಂಬಳಬೆಟ್ಟು, ಸಾದಾತ್ ನಗರದಲ್ಲಿರುವ ನವೀಕೃತ ಮುಹಿಯುದ್ದೀನ್ ಮಸೀದಿಯ ಉದ್ಘಾಟನಾ ಸಮಾರಂಭ ನಡೆಯಿತು.

ಸಯ್ಯದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಸೀದಿಯು ವಿಶಾಲವಾಗಿ ಬಹಳ ಸುಂದರವಾಗಿದ್ದು, ಆರಾಧನೆಯ ಮೂಲಕ ಮಸೀದಿಯನ್ನು ಮತ್ತಷ್ಟು ಅಲಂಕರಿಸಲು ಕರೆ ನೀಡಿದರು.

ಮಸೀದಿಯ ವಿಸ್ತೃತ ಸ್ಥಳದ ವಕ್ಫ್ ನಿರ್ವಹಣೆಯನ್ನು ಝೈನುಲ್ ಉಲಮಾ ಮಾಣಿ ಉಸ್ತಾದ್ ನಿರ್ವಹಿಸಿದರು. ಮಗ್ರಿಬ್ ನಮಾಝ್ ಬಳಿಕ ಸಭಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತ್ ಕಮಿಟಿ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ ಅವರು ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಳ್ಳಿದರ್ಸ್ ಮೂಲಕ ಇಲ್ಲಿ ಮುತಅಲ್ಲಿಂಗಳು ವಿದ್ಯಾರ್ಜನೆಗೆಯುವುದು ಬಹಳ ಸಂತೋಷದ ವಿಷಯ ಎಂದರು.

ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮೊಹಮ್ಮದ್, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಚಯರ್ಮ್ಯಾನ್ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಉಪಸ್ಥಿತರಿದ್ದರು.

ಖ್ಯಾತ ವಿದ್ವಾಂಸ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರಿಂದ ಧಾರ್ಮಿಕ ಪ್ರಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಇಬ್ರಾಹಿಂ ಮದನಿ ಉಸ್ತಾದ್ ಹಾಗೂ ಮಸೀದಿ ನವೀಕರಣಕ್ಕೆ ಧನ ಸಹಾಯ ಮಾಡಿದ ದಾನಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುದರ್ರಿಸ್ ಅಬೂಸ್ವಾಲಿಹ್ ಕಾಮಿಲ್ ಸಖಾಫಿ, ಸಯ್ಯದ್ ಪೂಕುಂಞಿ ತಂಙಳ್ ಉದ್ಯಾವರ, ವಾಲೆಮುಂಡೋವು ಉಸ್ತಾದ್, ರಾಜ್ಯ ಸುನ್ನಿ ಜಮೀಯತುಲ್ ಉಲೆಮಾ ಸದಸ್ಯರಾದ ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು, ಉಕ್ಕುಡ ಮುದರ್ರಿಸ್ ಹಾಫಿಲ್ ಅಹ್ಮದ್ ಕಾಮಿಲ್ ಸಖಾಫಿ, ಹಾಜಿ ಮೊಯಿದೀನ್ ಶಾಫಿ ಕಂಬಳಬೆಟ್ಟು, ಅಬ್ದುಲ್ ಖಾದರ್ ಹಾಜಿ ಬದ್ರಿಯಾ, ಅಬ್ದುಲ್ ಖಾದರ್ ಹಾಜಿ ಸುನ್ನಿ, ಜಮಾತ್ ಕಮಿಟಿಯ ಉಪಾಧ್ಯಕ್ಷ  ರಝಾಕ್ ಬಾಂಬೆ, ಮಹ್ಮೂದ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ನಾಸಿರ್ ಅಲಾದಿನಗರ ಹಾಗೂ ಕೋಶಾಧಿಕಾರಿ ಅಬುಬಕ್ಕರ್ ನೆಕ್ಕರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!