March 18, 2026

ಉಡುಪಿ: ಬಸ್ ಚಾಲಕ, ಟೆಂಪೋ ಚಾಲಕರ ನಡುವೆ ಹೊಡೆದಾಟ,. ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

0
image_editor_output_image908403956-1739093876658.jpg

ಉಡುಪಿ: ಭಾನುವಾರ ಬೆಳ್ಳಂಬೆಳಗೆ ಉಡುಪಿ ಸಂತೆ ಕಟ್ಟೆ ಬಳಿ ಬಸ್ ಚಾಲಕ ಹಾಗೂ ಟೆಂಪೋ ಚಾಲಕರ ನಡುವೆ ಹೊಡೆದಾಟ ನಡೆದಿದೆ. ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ ಚಾಲಕರು ಹೊಡೆದಾಡಿಕೊಂಡಿದ್ದು, ಹಲವು ಸಮಯಗಳ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಸಂತೆ ಕಟ್ಟೆ ಸಮೀಪ ಕಾರ್ಮಿಕರನ್ನು ತುಂಬಿಕೊಂಡು ಹೋಗುತ್ತಿದ್ದ ಟೆಂಪೋ ಒಂದನ್ನು ಖಾಸಗಿ ಬಸ್ ಅತೀ ವೇಗವಾಗಿ ಓವರ್ ಟೇಕ್ ಮಾಡಿದೆ. ಈ ವೇಳೆ ಟೆಂಪೋಗೆ ಬಸ್ ತಾಗುವ ಭಯದಲ್ಲಿ ಟೋಂಪೋ ಚಾಲಕ ವಾಹನವನ್ನು ಸೈಡ್‌ ತೆಗೆದುಕೊಂಡಿದ್ದಾನೆ. ಈ ವೇಳೆ ಡಿವೈಡರ್ ಮೇಲೆ ಏರಿದ ಟೆಂಪೋ ಅಪಘಾತವಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ಕಾರಣದಿಂದ ಖಾಸಗಿ ಬಸ್ ಚಾಲಕ ಮತ್ತು ಟೆಂಪೋ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದ್ದು ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಸಾರ್ಜನಿಕರು ಸೇರಿ ಗಲಾಟೆ ನಿಯಂತ್ರಿಸುತ್ತಿರುವಾಗಲೆ ಬಸ್‌ ಗೆ ಯಾರೋ ಕಲ್ಲು ಎಸೆದಿದ್ದು ಮತ್ತೆ ಗಲಾಟೆ ಆರಂಭವಾಗಿದೆ.

Leave a Reply

Your email address will not be published. Required fields are marked *

error: Content is protected !!