March 14, 2025

ಕಾರವಾರ: ದರೋಡೆಗೆ ಸಂಚು: 8 ಆರೋಪಿಗಳ ಬಂಧನ

0

ಕಾರವಾರ : ಮುಂಡಗೋಡ ಸನಿಹ ಬಡ್ಡಿಗೇರಿ ಕ್ರಾಸ್ ನಿಂದ ಒಂದು ಕಿ.ಮೀ.ದೂರದಲ್ಲಿ ದಾರಿಯಲ್ಲಿ ಹಾದು ಹೋಗುವ ಶ್ರೀಮಂತರ ದರೋಡೆಗೆ ಹೊಂಚು ಹಾಕಿದ್ದ ಆರೋಪದಲ್ಲಿ ಮುಂಡಗೋಡ ದೇಶಪಾಂಡೆ ನಗರ, ಕಿಲ್ಲೆ ಓಣಿ, ಮಾರಿಕಾಂಬಾ ನಗರದ ಎಂಟು ಜನರನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.

ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದರೋಡೆಗೆ ಹೊಂಚು ಹಾಕಿದ್ದ ಮಲ್ಲಿಕ ಜಾನ್, ಮಹಮ್ಮದ್ ಇಬ್ರಾಹಿಂ ಜಮಖಂಡಿ, ಶಾಹಿಲ್, ಹರೋಣ್, ಮಹಮ್ಮದ್ ಯೂಸೆಫ್, ಮಹಮ್ಮದ್ ಇಸ್ಮಾಯಿಲ್, ತಸ್ವೀ‌ರ್ ಅಕ್ಕಿ ಅಲೂರು, ದಾದಾ ಕಲಂದರ್ ಎಂಬ ಎಂಟು ಜನರನ್ನು ಬಂಧಿಸಲಾಗಿದೆ.ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇವರು ಬಳಸಿದ ಕಾರು, ಕಬ್ಬಿಣದ ರಾಡುಗಳು, ಎರಡು ಕಟ್ಟಿಗೆ ತುಂಡು, ಗಮ್ ಟೇಪ್ ವಶಕ್ಕೆ ಪಡೆಯಲಾಗಿದೆ. ಎಸ್ಪಿ ನಾರಾಯಣ, ಅಡಿಶನಲ್ ಎಸ್ಪಿ ಜಗನ್ನಾಥ ನಾಯ್ಕ, ಶಿರಸಿ ಡಿವೈಎಸ್ಪಿ ದರೋಡೆಕೋರರ ಬಂಧನಕ್ಕೆ ಮಾರ್ಗದರ್ಶನ ಮಾಡಿದ್ದರು. ದಾರಿ ಹೋಕರನ್ನು ಬೆದರಿಸಿ ದರೋಡೆಗೆ ಹೊಂಚು ಹಾಕಿದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿತ್ತು.

 

 

Leave a Reply

Your email address will not be published. Required fields are marked *

error: Content is protected !!