ರಜೆ ಸಿಗದ ಕೋಪ: ನಾಲ್ವರು ಸಹೋದ್ಯೋಗಿಗಳಿಗೆ ಚಾಕುವಿನಿಂದ ಇರಿದ ಸರಕಾರಿ ನೌಕರ
ಕೊಲ್ಕತ್ತಾ: ರಜೆ ಸಿಗದ ಹಿನ್ನೆಲೆಯಲ್ಲಿ ಸರಕಾರಿ ನೌಕರನೋರ್ವ ಕೋಪಗೊಂಡು ತನ್ನ ನಾಲ್ವರು ಸಹೋದ್ಯೋಗಿಗಳ ಮೇಲೆ ಚಾಕುವಿನಿಂದ ಇರಿದ ಘಟನೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ.
ಆರೋಪಿಯನ್ನು ಅಮಿತ್ ಕುಮಾರ್ ಸರ್ಕಾರ್ ಎಂದು ಗುರುತಿಸಲಾಗಿದೆ. ಅಮಿತ್ ಕುಮಾರ್ ಸರ್ಕಾರ್ ಪಶ್ಚಿಮ ಬಂಗಾಳದ ಸರಕಾರಿ ನೌಕರನಾಗಿದ್ದು ಈತನಿಗೆ ತುರ್ತು ರಜೆಯ ಅವಶ್ಯಕತೆ ಇತ್ತು ಎನ್ನಲಾಗಿದೆ ಅದರಂತೆ ಆತ ರಜೆಗಾಗಿ ಅರ್ಜಿಯನ್ನೂ ಸಲ್ಲಿಸಿದ್ದ ಆದರೆ ಮೇಲಧಿಕಾರಿ ರಜೆ ಕೊಡಲು ನಿರಾಕರಿಸಿದ್ದಾರೆ ಇದರಿಂದ ಕೋಪಗೊಂಡ ಅಮಿತ್ ತನ್ನ ಸಹೋದ್ಯೋಗಿಗಳ ಜೊತೆ ಜಗಳವಾಡಿ ಅಲ್ಲೇ ಇದ್ದ ಚಾಕುವಿನಿಂದ ಮೂವರು ಸಹೋದ್ಯೋಗಿಗಳಿಗೆ ಇರಿದಿದ್ದಾನೆ ಈ ವೇಳೆ ತಡೆಯಲು ಬಂದ ಸೆಕ್ಯೂರಿಟಿ ಗಾರ್ಡಿಗೂ ಇರಿದು ಬ್ಯಾಗ್ ಹೆಗಲಿಗೆ ಹಾಕಿಕೊಂಡು ಕೈಯಲ್ಲಿ ರಕ್ತಸಿಕ್ತ ಚಾಕುವನ್ನು ಹಿಡಿದುಕೊಂಡು ಕಚೇರಿಯಿಂದ ಹೊರಬಂದಿದ್ದಾನೆ.




