ಬೆಂಗಳೂರು: ಕಾರು ಹಾಗೂ ಬೈಕ್ ಚಾಲಕರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಮತ್ತು ಹಣ ಕಳವು ಮಾಡುತ್ತಿದ್ದ ‘ಪಿಂಟರಗುಂಟ ಗ್ಯಾಂಗ್’ನ ಇಬ್ಬರನ್ನು ಕಾಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಖಿಲ್ ಹಾಗೂ ಗೋಪಿ ಬಂಧಿತರು. ಬಂಧಿತರಿಂದ 101 ಗ್ರಾಂ. ಚಿನ್ನಾಭರಣ, ₹4.50 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.