ಸವಣೂರು: ನಕಲಿ ಫೋನ್ ಪೇ ಸ್ಕ್ಯಾನರ್ ಸ್ಕ್ಯಾನ್ ಮೂಲಕ ವರ್ತಕರಿಗೆ ವಂಚನೆ: ಆರೋಪಿಯ ಬಂಧನ

ಆಲಂಕಾರು: ನಕಲಿ ಫೋನ್ ಪೇ ಬಳಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಆಲಂಕಾರಿನ ವರ್ತಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಆಲಂಕಾರಿನಲ್ಲಿ ನಡೆದಿದೆ.
ಸವಣೂರು ಮಾಂತೂರು ನಿವಾಸಿ ಸಮೀರ್(27ವ) ಎಂಬ ಯುವಕ ಅಂಗಡಿಗಳಿಗೆ ತೆರಳಿ ಮನೆಗೆ ಬೇಕಾಗುವ ಸಾಮಾನು, ಹಣ್ಣು ಹಂಪಲು ಖರೀದಿಸಿ ಬಳಿಕ ಹಣ ಬೇಕು ಮತ್ತು ಒಟ್ಟು ಮೊತ್ತವನ್ನು ಒಟ್ಟು ಸೇರಿಸಿ ಪೋನ್ ಪೇ ಮಾಡುತ್ತೇನೆ ಎಂದು ಹೇಳಿ ನಕಲಿ ಪೊನ್ ಪೇ ಮೂಲಕ ಸ್ಕ್ಯಾನರ್‌ಗೆ ಸ್ಕ್ಯಾನ್ ಮಾಡಿ ಹಣ ಸಂದಾಯವಾಗಿರುತ್ತದೆ ಎಂದು ನಂಬಿಸಿ ತಾನು ಬೇಡಿಕೆ ಇಟ್ಟಿರುವ ಮೊತ್ತವನ್ನು ಪಡೆದು ಜಾಗ ಖಾಲಿ ಮಾಡುತ್ತಿದ್ದ ಎಂದು ವರ್ತಕರು ಆರೋಪಿಸಿದ್ದಾರೆ. ಆಲಂಕಾರು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಈತ ವರ್ತಕರಿಗೆ ಈ ರೀತಿ ವಂಚನೆ ಮಾಡಿರುತ್ತಾನೆ.