ಮಂಗಳೂರು: “ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆಯ ಪ್ರಧಾನ ಸಂಪಾದಕ ಶಶಿ ಬಂಡಿಮಾರ್ ಹೃದಯಾಘಾತದಿಂದ ಮೃತ್ಯು
ಮಂಗಳೂರು: “ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆಯ ಪ್ರಧಾನ ಸಂಪಾದಕ ಶಶಿ ಆರ್. ಬಂಡಿಮಾರ್ (41) ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಗಾಲ್ಯಾಂಡ್ ನಲ್ಲಿ ತನ್ನ ಮರದ ಫ್ಯಾಕ್ಟರಿಗೆ ಹೋಗಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ.
“ಟೈಮ್ಸ್ ಆಫ್ ಕುಡ್ಲ” ಎಂಬ ತುಳು ವಾರಪತ್ರಿಕೆಯನ್ನು 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು. ಸಣ್ಣ ಕೈಗಾರಿಕೆಯಲ್ಲೂ, ಆತಿಥ್ಯ ಕ್ಷೇತ್ರ ದಲ್ಲೂ ಸಕ್ರಿಯವಾಗಿದ್ದರು . ಶಶಿ ಬಂಡಿಮಾರ್ ಅವರಿಗೆ ಜೈ ತುಳುನಾಡ್ (ರಿ) ಸಂಘಟನೆ “ತುಳುವ ನೇಸರೆ” ಎನ್ನುವ ಬಿರುದು ನೀಡಿದೆ. ಅಲ್ಲದೆ ಅನೇಕ ಬಿರುದು ಪ್ರಶಸ್ತಿಗಳನ್ನು ಅನೇಕ ತುಳು ಸಂಘಟನೆಗಳು ನೀಡಿ ಗೌರವಿಸಿದ್ದವು. ಅವರು ತಾಯಿ, ಪತ್ನಿ, ಸಹೋದರಿ, ಇಬ್ಬರು ಸಹೋದರರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.




