March 19, 2026

ಗುಂಡೇನಹಳ್ಳಿ ಬಳಿ ಭೀಕರ ಸರಣಿ ಅಪಘಾತ: ಕಾರು ಸಂಪೂರ್ಣ ನಜ್ಜುಗುಜ್ಜಾದರೂ ಪವಾಡ ರೀತಿಯಲ್ಲಿ ಚಾಲಕ ಪಾರು

0
image_editor_output_image1112644753-1737356961064.jpg

ನೆಲಮಂಗಲ: ಬೆಳ್ಳಂಬೆಳಗ್ಗೆ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ-48ರ ಗುಂಡೇನಹಳ್ಳಿ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಆದ್ರೆ ಕಾರು ಲಾರಿ ಕೆಳಗೆ ಸಿಲುಕಿ ನಜ್ಜುಗುಜ್ಜಾದರೂ ಪವಾಡ ರೀತಿಯಲ್ಲಿ ಚಾಲಕ ಪಾರಾಗಿದ್ದಾರೆ.

ಸ್ವಿಫ್ಟ್ ಕಾರು, ಲಾರಿ ಹಾಗೂ ಟೂರಿಸ್ಟ್ ಬಸ್ ಮಧ್ಯೆ ಅಪಘಾತ ಸಂಭವಿಸಿದೆ. ಮೊದಲು ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿಯೊಡೆದಿದೆ, ಕಾರಿಗೆ ಹಿಂಬದಿಯಿಂದ ಟೂರಿಸ್ಟ್‌ ಬಸ್ ಡಿಕ್ಕಿ ಹೊಡೆದಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!