March 18, 2026

ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿಯ ಬಂಧನ

0
image_editor_output_image-1133634108-1737103809384.jpg

ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಡರಾತ್ರಿ ಮನೆಗೆ ನುಗ್ಗಿ ನಟನಿಗೆ ಇರಿದಿದ್ದ ಹಂತಕ ಈಗ ಜೈಲು ಪಾಲಾಗಿದ್ದಾರೆ.

ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದಿದ್ದ ದಾಳಿಕೋರನನ್ನು ನಿನ್ನೆ (ಜ.16) ತಡರಾತ್ರಿ ಮುಂಬೈ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸೈಫ್‌ ಮೇಲಿನ ಅಟ್ಯಾಕ್‌ ಬೆನ್ನಲ್ಲೇ ದಾಳಿಕೋರನ ಹುಡುಕಲು ಮುಂಬೈ ಪೋಲಿಸರು 20 ತಂಡ ರಚಿಸಿ ಬಲೆ ಬೀಸಿದ್ದರು. ಕೊನೆಗೂ ದಾಳಿಕೋರ ಪೋಲೀಸರ ಅತಿಥಿಯಾಗಿದ್ದಾನೆ.

ಇದು ದರೋಡೆ ಮಾಡಲು ಈ ಕೃತ್ಯ ಎಸಗಿದ್ದ ಅಥವಾ ಕೊಲೆ ಮಾಡುವ ಹುನ್ನಾರ ಇತ್ತಾ? ಎಂಬುದನ್ನು ತಿಳಿಯಲು ವಿವಿಧ ರೀತಿಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಬಂಧಿತನಾಗಿರುವ ಆರೋಪಿ ಈ ಹಿಂದೆ ಶಾರುಖ್ ಖಾನ್ ಮನೆ ಮುಂದೆ ಕೂಡ ಕಾಣಿಸಿಕೊಂಡಿರೋದು ಕೂಡ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!