ಜನವರಿ 17 ಶುಕ್ರವಾರ ಜುಮಾ ನಮಾಝಿಗೆ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ನೇತೃತ್ವ: ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವಾಸಿಗಳು ಭಾಗವಹಿಸಲು ಕನ್ಯಾನ ಜಮಾಅತ್ ಆಡಳಿತ ಸಮಿತಿ ಕರೆ
ಭಾರತೀಯ ಮುಸಮುಸಲ್ಮಾನರ ಅಗ್ರೇಸರ ನೇತೃತ್ವ ವಿಶ್ವೋತ್ತರ ಉಲಮಾ ಪಂಡಿತ, ಇಂಡಿಯನ್ ಇಂಡಿಯನ್ ಗ್ರ್ಯಾಂಡ್ ಮುಫ್ತಿ , ಕನ್ಯಾನ ಖಾಝಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಜನವರಿ 17 ಶುಕ್ರವಾರ ದಂದು ಕನ್ಯಾನಕ್ಕೆ ಆಗಮಿಸಿ ಜುಮಾ ನಮಾಝಿಗೆ ನೇತೃತ್ವ ನೀಡಲಿದ್ದಾರೆ
ಜನವರಿ 9ನೇ ತಾರೀಖಿನಿಂದ ಪ್ರಾರಂಭಗೊಂಡ ಕನ್ಯಾನ ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಉದಯಾಸ್ತಮಾನ ಉರೂಸ್ ಮುಬಾರಕ್ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ ಮತ ಪ್ರವಚನದ ಭಾಗವಾಗಿ ಅವರು ಕನ್ಯಾನಕ್ಕೆ ಆಗಮಿಸುತ್ತಿದ್ದಾರೆ
ಶುಕ್ರವಾರ ಮಧ್ಯಾನ ನಡೆಯುವ ಜುಮಾ ನಮಾಝಿಗೂ ಆನಂತರ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೂ ಊರ ಪರ ಊರ ವಿಶ್ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕನ್ಯಾನ ರಹ್ಮಾನಿಯಾ ಜಮಾಅತ್ ಆಡಳಿತ ಸಮಿತಿಯ ಪದಾದಿಕಾರಿಗಳು ಕರೆ ನೀಡಿರುತ್ತಾರೆ




