ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತ ಶರತ್ ಲಾಲ್, ಕೃಪೇಶ್ ಹತ್ಯೆ ಪ್ರಕರಣ: 14 ಆರೋಪಿಗಳು ದೋಷಿಗಳೆಂದು ತೀರ್ಪು ಪ್ರಕಟ
ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾದ ಪೆರಿಯ ಕಳ್ಳಿಯೊಟ್ ನ ಶರತ್ ಲಾಲ್(19) ಮತ್ತು ಕೃಪೇಶ್ (20) ಹತ್ಯೆ ಪ್ರಕರಣದಲ್ಲಿ 14 ಆರೋಪಿಗಳನ್ನು ಎರ್ನಾಕುಲಂ ಸಿಬಿಐ ಕೋರ್ಟ್ ದೋಷಿಗಳೆಂದು ತೀರ್ಪು ನೀಡಿದೆ.
ಮಾಜಿ ಶಾಸಕ ಕೆ.ವಿ.ಕುಂಞಿರಾಮನ್ ಸೇರಿದಂತೆ 14 ಆರೋಪಿಗಳು. ನ್ಯಾಯಾಲಯ 10 ಮಂದಿಯನ್ನು ಖುಲಾಸೆಗೊಳಿಸಿದೆ. 1 ರಿಂದ 10 ಆರೋಪಿಗಳ ಮೇಲೆ ಕೊಲೆ ಆರೋಪವಿದ್ದು, ಶಿಕ್ಷೆಗೊಳಗಾದ 14 ಮಂದಿಯಲ್ಲಿ ಹತ್ತು ಮಂದಿ ಪ್ರಮುಖ ಸಿಪಿಎಂ ನಾಯಕರು.
ಎ ಪೀತಾಂಬರನ್, ಸಿಪಿಎಂ ಪೆರಿಯ ಸ್ಥಳೀಯ ಸಮಿತಿಯ ಮಾಜಿ ಸದಸ್ಯ, ಸಾಜಿ ಸಿ. ಜಾರ್ಜ್, ಕೆ.ಎಂ. ಸುರೇಶ್, ಕೆ. ಅನಿಲ್ ಕುಮಾರ್, ಜಿಜಿನ್, ಆರ್. ಶ್ರೀರಾಗ್, ಎ. ಅಶ್ವಿನ್ ಮತ್ತು ಸುಬಿಶ್ ಕೊಲೆ ಆರೋಪಿಗಳು. ಒಂಬತ್ತನೇ ಪ್ರತಿವಾದಿ ಎ ಮುರಳಿ, ಟಿ ರಂಜಿತ್, ಕೆ. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಎ. ಸುರೇಂದ್ರನ್, ಉದುಮ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್, ರಾಘವನ್ ವೆಲ್ತೋಳಿ ಮತ್ತು ಕೆ.ವಿ.ಭಾಸ್ಕರನ್ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.




