ಸೇತುವೆ ಮೇಲಿಂದ ಚರಂಡಿಗೆ ಬಿದ್ದ ಖಾಸಗಿ ಬಸ್: 8 ಮಂದಿ ಸ್ಥಳದಲ್ಲೇ ಸಾವು
ಪಂಜಾಬ್: ಖಾಸಗಿ ಬಸ್ ಒಂದು ಸೇತುವೆ ಮೇಲಿಂದ ಚರಂಡಿಗೆ ಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ಪಂಜಾಬ್‌ನ ಬತಿಂಡಾದಲ್ಲಿ ನಡೆದಿದೆ.
ಸುಮಾರು 50 ಮಂದಿ ಇದ್ದ ಖಾಸಗಿ ಬಸ್ ಪಂಜಾಬ್‌ನ ಸರ್ದುಲ್‌ಗಢದಿಂದ ಬತಿಂಡಾಗೆ ತೆರಳುತ್ತಿತ್ತು. ಈ ವೇಳೆ ಜಿವಾನ್ ಸಿಂಗ್ ವಾಲಾ ಗ್ರಾಮದಲ್ಲಿ ಸೇತುವೆ ಮೇಲಿಂದ ಚರಂಡಿಗೆ ಬಿದ್ದಿದೆ. ಕೂಡಲೇ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು. ಅಪಘಾತದಲ್ಲಿ 8 ಜನ ಸಾವನ್ನಪ್ಪಿದ್ದು, 18ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.




