ಪಿಗ್ಮಿ ಸಂಗ್ರಹಿಸುತಿದ್ದ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ
ಕಾರವಾರ: ಸಿದ್ದಾಪುರ ಪಟ್ಟಣದಲ್ಲಿ ಪಿಗ್ಮಿ ಸಂಗ್ರಹಿಸಿ ಬದುಕುತ್ತಿದ್ದ ಗೀತಾ ಪ್ರಭಾಕರ ಹುಂಡೇಕರ್ (72)ಎಂಬ ಮಹಿಳೆಯನ್ನು ಆಕೆಯ ಮನೆಯಲ್ಲಿ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ.
ಸಿದ್ದಾಪುರ ಪಟ್ಟಣದ ಬಸವನಗಲ್ಲಿಯ ಮನೆಯಲ್ಲಿ ಈ ಕೃತ್ಯ ನಡೆದಿದೆ. ಆರೋಪಿಗಳು ಮನೆಗೆ ಹೆಂಚು ತೆಗೆದು ಒಳ ನುಗ್ಗಿ ಕೊಲೆ ಗೈದಿದ್ದಾರೆ.
ಗೀತಾ ಅವರು ವಿನಾಯಕ ಸೌಹಾರ್ದ ಕೋಅಪರೇಟಿವ್ ಸೊಸೈಟಿಗೆ ದಿನವೂ ಐದ ರಿಂದ ಹತ್ತು ಸಾವಿರ ಪಿಗ್ಮಿ ಸಂಗ್ರಹಿಸಿ ,ಸೊಸೈಟಿಗೆ ತುಂಬುತ್ತಿದ್ದರು.
ಒಂಟಿಯಾಗಿ ವಾಸಿಸುತ್ತಿದ್ದರು. ಇದನ್ನು ಅರಿತ ದುಷ್ಕರ್ಮಿಗಳು ಹಣಕ್ಕಾಗಿ ಮಹಿಳೆಯ ಕೊಲೆ ಮಾಡಿದ್ದಾರೆಂದು ಸಂಶಯಿಸಲಾಗಿದೆ. ಗೀತಾ ಅವರ ಅಳಿಯ ರಾಘವೇಂದ್ರ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಸಿದ್ದಾಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ.




