ಕಾರವಾರ: ಬೀಚ್ ನಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ
ಕಾರವಾರ : ಗೋಕರ್ಣದ ಮಿಡ್ಲ ಬೀಚ್ ನಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಕೇರಳದ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಸಮುದ್ರದ ಅಲೆಗೆ ಕೊಚ್ಚಿ ಹೋಗುವುದನ್ನು ಕಂಡ ಲೈಫ್ಗಾರ್ಡ್ಸ ತಕ್ಷಣ ಕಾರ್ಯಾಚರಣೆಗೆ ಇಳಿದು ಕೇರಳದ ಯುವತಿಯರಾದ ತೇಜಸ್ವಿನಿ, ಅದ್ವೈತ,,ಪ್ರಿಯಾಂವದ ಹಾಗೂ ವಯಸ್ಕರಾದ ಮುರುಳಿ ಅವರನ್ನು ನೀರಿನಿಂದ ಎಳೆದುತರಲಾಗಿದೆ.
ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಈ ನಾಲ್ವರು ಪ್ರವಾಸಿಗರನ್ನು ಲೈಫ್ ಗಾರ್ಡ್ಸ ಗಳಾದ ಮಹೇಶ್ ,ರಾಘವೇಂದ್ರ ಗೌಡ , ಸಂತೋಷ ಗೌಡ ರಕ್ಷಿಸಿದ್ದಾರೆ.




