March 20, 2026

ಪೊಲೀಸರ ವಿರುದ್ಧ ಕೋಪದಿಂದ ರೇಗಾಡಿದ ವಿಪಕ್ಷ ನಾಯಕ ಆರ್.ಅಶೋಕ್

0
image_editor_output_image506471207-1734673497424.jpg

ಬೆಳಗಾವಿ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಮತ್ತು ಹಿರಿಯ ಬಿಜೆಪಿ ನಾಯಕ ಸಿಟಿ ರವಿ ಅವರ ಬಂಧನ ರಾಜ್ಯದಾದ್ಯಂತ ಕೋಲಾಹಲ ಸೃಷ್ಟಿಸಿದೆ.

ನಿನ್ನೆ ರಾತ್ರಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಶಾಸಕ ಅರವಿಂದ್ ಬೆಲ್ಲದ್, ರವಿಯವರನ್ನು ಕಾಣಲು ಬಂದಾಗ ಅವರನ್ನು ಒಳಗಡೆ ಬಿಡದೆ ಗೇಟಿನ ಬಳಿಯೇ ತಡೆಯಲಾಯಿತು.

ಪೊಲೀಸರ ವರ್ತನೆಯಿಂದ ತಾಳ್ಮೆ ಕಳೆದುಕೊಂಡ ಅಶೋಕ ಕೋಪದಿಂದ ರೇಗಾಡಿದರು. ಮೆಟ್ಟಿಲುಗಳ ಬಳಿ ಅಶೋಕ ಅವರಿಗೆ ಅಡ್ಡ ಹಾಕಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯನ್ನು, ನಾಚಿಕೆ ಆಗಲ್ವಾ ನಿಂಗೆ? ನನ್ನನ್ನ ಯಾರು ಅನ್ಕೊಂಡಿದ್ದೀಯಾ? ಅಂತ ಜರಿದರು.

Leave a Reply

Your email address will not be published. Required fields are marked *

error: Content is protected !!