January 5, 2025

ಕೊಡಂಗಾಯಿ: ಜ.2ರಂದು ಮಸ್ಜಿದ್ ಯಾಸೀನ್ ಹಾಗೂ ಶಂಸುಲ್ ಹುದಾ ಮದ್ರಸ ಉದ್ಘಾಟನೆ: ಪ್ರಚಾರ ಸಮಿತಿ ರಚನೆ-ಅಧ್ಯಕ್ಷರಾಗಿ ಹಮೀದ್.ಟಿ ಕೊಡಂಗಾಯಿ ಆಯ್ಕೆ

0

ವಿಟ್ಲ: ಕೊಡಂಗಾಯಿ ರಾಧುಕಟ್ಟೆ ಯಲ್ಲಿ ನೂತನವಾಗಿ ನಿರ್ಮಿಸಿದ ಮಸ್ಜಿದ್ ಯಾಸೀನ್ ಹಾಗೂ ಶಂಸುಲ್ ಹುದಾ ಮದ್ರಸ ಇದರ ಉದ್ಘಾಟನಾ ಸಮಾರಂಭವು 2025 ಜನವರಿ 2 ಗುರುವಾರ ಸಂಜೆ 5 ಗಂಟೆಗೆ ನಡೆಯಲಿರುವುದು.

ಉದ್ಘಾಟನಾ ಸಮಾರಂಭದ ಪ್ರಯುಕ್ತ ಮೌಲೂದ್ ಮಜ್ಲಿಸ್ ಹಾಗೂ ಏಕದಿನ ಧಾರ್ಮಿಕ ಮತ ಪ್ರವಚನ ಜರಗಲಿರುವುದು. ಮುಖ್ಯ ಪ್ರಬಾಷಣಕಾರ ರಾಗಿ ಖ್ಯಾತ ಪ್ರಭಾಷಣಗಾರರಾದ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ
ಹಾಗೂ ಹಲವಾರು ಸಯ್ಯಿದರು, ಉಲಮಾ-ಉಮರಾ, ಧಾರ್ಮಿಕ-ಸಾಮಾಜಿಕ ಮುಖಂಡರುಗಳು ಭಾಗವಹಿಸುವ ಕಾರ್ಯಕ್ರಮದ ಯಶಸ್ವಿಗಾಗಿ ಪ್ರಚಾರ ಸಮಿತಿ ರೂಪಿಸಲಾಯಿತು.

ಪ್ರಚಾರ ಸಮಿತಿ ಪದಾಧಿಕಾರಿಗಳು:
ಗೌರವಾಧ್ಯಕ್ಷರಾಗಿ ಫಾರೂಕ್ ಕುಂಡಡ್ಕ,ರಾಧುಕಟ್ಟೆ,
ಅಧ್ಯಕ್ಷರಾಗಿ: ಹಮೀದ್ ಟಿ.ಕೊಡಂಗಾಯಿ,
ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಟಿ ಎಂ,
ಉಪಾಧ್ಯಕ್ಷರಾಗಿ ಅಝರುದ್ದೀನ್ ಕೊಡಂಗಾಯಿ, ಜೊತೆ ಕಾರ್ಯದರ್ಶಿಯಾಗಿ ಹಾರಿಸ್ ಎಸ್.ಕೆ ರಾಧುಕಟ್ಟೆ ಇವರುಗಳನ್ನು ಆಯ್ಕೆ ಮಾಡಲಾಯಿತು.

 

 

ವಿವಿಧ ಉಪ ಸಮಿತಿಗಳ ನಾಯಕರುಗಳಾಗಿ
ಹಸೈನಾರ್ ಟಿ.ಎಂ.ಕೊಡಂಗಾಯಿ,
ಯಹ್ಯಾ ಪರ್ಲಾರ್,
ಕರೀಂ ಟಿಪ್ಪುನಗರ,
ಶಫೀಕ್ ಪರ್ಲಾರ್,
ಹಸೈನಾರ್ ಬಿಕ್ನಾಜೆ,
ಮಸೂದ್ ಟಿಪ್ಪುನಗರ ಇವರುಗಳನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!