NEW YEAR: ಸ್ಟೋರ್ ಮಾಡಲಾಗಿದ್ದ 24 ಕೋಟಿ ರೂ. ಮೌಲ್ಯದ ಬಾಂಬೆ ಡ್ರಗ್ಸ್ ಜಪ್ತಿ
ಬೆಂಗಳೂರು: ನ್ಯೂ ಇಯರ್‌ಗೆ ಕಿಕ್ಕೇರಿಸಲು ಸ್ಟೋರ್ ಮಾಡಲಾಗಿದ್ದ 24 ಕೋಟಿ ರೂ. ಮೌಲ್ಯದ ಬಾಂಬೆ ಡ್ರಗ್ಸ್ ಸಿಸಿಬಿ ಕೈಗೆ ಸಿಕ್ಕಿದೆ.
ನೈಜಿರಿಯಾದ ಖತರ್ನಾಕ್ ಲೇಡಿ ದಿನಸಿ ಐಟಂ ಜೊತೆ ಡ್ರಗ್ಸ್ ಇಟ್ಟು ಮಾರಾಟ ಮಾಡ್ತಿದ್ದಾಗಲೇ ಸಿಸಿಬಿ ಬಲೆಗೆ ಬಿದ್ದಿದ್ದಾಳೆ.
ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ನ್ಯೂ ಇಯರ್ ಸೆಲೆಬ್ರೆಷನ್‌ಗೆ ಭರ್ಜರಿ ಪ್ಲ್ಯಾನಿಂಗ್ ನಡೀತಿದೆ. ಈ ಮಧ್ಯೆ ಯುವ ಪೀಳಿಗೆ ಹಾದಿ ತಪ್ಪಿಸಿ ಡ್ರಗ್ ಕಿಕ್ಕೇರಿಸಲು ಪೆಡ್ಲರ್‌ಗಳು ತಯಾರಾಗಿದ್ದಾರೆ. ಕೋಟಿ ಕೋಟಿ ಬೆಲೆಯ ಡ್ರಗ್ಸ್ ಸ್ಟೋರ್ ಮಾಡಿದ್ದ ಲೇಡಿ ಪೆಡ್ಲರ್ ಸಿಸಿಬಿ ಬಲೆಗೆ ಬಿದ್ದಿದ್ದಾಳೆ.