ಬಂಟ್ವಾಳ: ಆಟೋ ರಿಕ್ಷಾ ಪಲ್ಟಿಯಾಗಿ ಸಜೀಪದ ಚಾಲಕ ಮೃತ್ಯು
ಬಂಟ್ವಾಳ: ರಿಕ್ಷಾ ಪಲ್ಟಿಯಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕನೊರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಘಟನೆ ಸಜೀಪದಲ್ಲಿ ನಡೆದಿದೆ.
ಸಜೀಪ ನಡು ನಿವಾಸಿ ರಿಚರ್ಡ್ ಮಾರ್ಟಿನ್ ( 58) ಎಂಬವರು ಮೃತಪಟ್ಟವರು.ಅವರು ಡಿ.8 ರಂದು ಮೆಲ್ಕಾರ್ ಕೋಣಾಜೆ ರಸ್ತೆಯ ಕೊಳಕೆಯಲ್ಲಿ ಸ್ವತಃ ರಿಕ್ಷಾವನ್ನು ಚಾಲನೆ ಮಾಡುತ್ತಿದ್ದ ವೇಳೆ ಸ್ಕಿಡ್ ಆಗಿ ರಿಕ್ಷಾ ಪಲ್ಟಿಯಾಗಿತ್ತು.
ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟ ಬಗ್ಗೆ ಟ್ರಾಫಿಕ್ ಪೋಲೀಸ್ ಇಲಾಖೆ ಮಾಹಿತಿ ನೀಡಿದೆ.