February 3, 2026

ಎರಡು ತಿಂಗಳ ಹೆಣ್ಣು ಮಗುವನ್ನೇ ಕೆರೆಗೆ ಎಸೆದ ತಾಯಿ!

0
n6435125401734273400816ff7372b76232e12d5c37f8f404bc2e804d2a41ed7caafd7e3d8909bbe9e868b4.jpg

ಬೆಳಗಾವಿ‌: ತಾಲೂಕಿನ ಕಣಬರಗಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ತನ್ನ ಎರಡು ತಿಂಗಳ ಹೆಣ್ಣು ಮಗುವನ್ನೇ ಕೆರೆಗೆ ಎಸೆದಿರುವ ಘಟನೆ ನಡೆದಿದೆ. ಕಣಬರಗಿ ಗ್ರಾಮದ ನಿವಾಸಿ ಶಾಂತಿ ಕರವಿನಕೊಪ್ಪ ಮಗುವಿಗೆ ಪಿಡ್ಸ್ ಬರುತ್ತೆ ಅಂತ ಹೆತ್ತ ಮಗುವನ್ನೇ ಕೆರೆಗೆ ಎಸೆದಿದ್ದು ಇದನ್ನು ನೋಡಿದ ಕೆಲ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗು ರಕ್ಷಣೆ ಮಾಡಿದ್ದಾರೆ.

ಕಣಬರಗಿ ಗ್ರಾಮದ ನಿವಾಸಿ ಶಾಂತಿ ಕರವಿನಕೊಪ್ಪ ಎಂಬುವವರು ಈ ಕೃತ್ಯ‌ವೆಸಗಿದ್ದಾರೆ. ಮಗುವನ್ನು ಕೆರೆಗೆ ಎಸೆದು ಓಡಿ ಹೋಗುತ್ತಿದ್ದ ತಾಯಿಯನ್ನು ತಡೆದು ಸ್ಥಳೀಯರು ಬುದ್ದಿ ಹೇಳಿದ್ದಾರೆ. ಮಗುವನ್ನು ರಕ್ಷಣೆ ಮಾಡಿ ಅವಳ ಕೈಗೆ ನೀಡಿದ್ದಾರೆ. ಬಳಿಕ ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.

ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ತಾಯಿ ಶಾಂತಿಯನ್ನು ಬಂಧಿಸಿದ್ದಾರೆ. ಇನ್ನೂ ಮಗುವನ್ನ ಕೆರೆಗೆ ಎಸೆದ ಕುರಿತು ವಿಚಾರಿಸಿದಾಗ ಮಗುವಿಗೆ ನಿರಂತರವಾಗಿ ಪಿಡ್ಸ್ ಬರ್ತಿದ್ದು ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರಲಾಗಿತ್ತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!