ಪಾಠ ಕೇಳುವಾಗ ತರಗತಿಯಲ್ಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಮೃತ್ಯು
ಚೆನ್ನೈ: ಟೀಚರ್ ಪಾಠ ಮಾಡುವ ವೇಳೆ ತರಗತಿಯಲ್ಲೇ ವಿದ್ಯಾರ್ಥಿನಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ರಾಣಿಪೇಟೆಯಲ್ಲಿ ನಡೆದಿದೆ.
ರಾಣಿಪೇಟೆಯ ಖಾಸಗಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅದ್ವಿತಾ(14) ಮೃತ ದುರ್ದೈವಿಯಾಗಿದ್ದಾಳೆ.
ಚೆನ್ನೈ-ಬೆಂಗಳೂರು ಹೆದ್ದಾರಿ (NH 44) ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು ಬೆಳಿಗ್ಗೆ 11.30 ರ ಸುಮಾರಿಗೆ ಟೀಚರ್ ತರಗತಿ ನಡೆಸುತ್ತಿದ್ದ ವೇಳೆ ಕೊನೆಯ ಬೆಂಚ್ ನಲ್ಲಿ ತನ್ನ ಸಹಪಾಠಿಯ ಜೊತೆ ಕುಳಿತ್ತಿದ್ದ ವಿದ್ಯಾರ್ಥಿನಿ ಅದ್ವಿತಾ ಒಮ್ಮೆಲೇ ಕುಸಿದು ಸಹಪಾಠಿಯ ಮೇಲೆ ಬಿದ್ದಿದ್ದಾಳೆ ಈ ವೇಳೆ ಗಾಬರಿಗೊಂಡ ಸಹಪಾಠಿ ಕಿರುಚಿದ್ದಾಳೆ.
ಇದನ್ನು ಗಮನಿಸಿದ ಶಿಕ್ಷಕಿ ಕೂಡಲೇ ಅದ್ವಿತಾ ನೆರವಿಗೆ ಧಾವಿಸಿದ್ದಾರೆ ಅಲ್ಲದೆ ಅಲ್ಲಿದ್ದ ಇತರ ವಿದ್ಯಾರ್ಥಿಗಳ ಬಳಿ ಶಾಲೆಯ ಶಿಕ್ಷಕರನ್ನು ಕರೆಯುವಂತೆ ಹೇಳಿದ್ದಾರೆ, ಕೂಡಲೇ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಶಿಕ್ಷಕರನ್ನು ಕರೆಯಲು ಓಡಿದ್ದಾರೆ.