March 19, 2026

ವಿಟ್ಲ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

0
IMG-20241211-WA0008.jpg

ವಿಟ್ಲ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕುಳಾಲು ಕುಡ್ತಡ್ಕ ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕುಡ್ತಡ್ಕ ನಿವಾಸಿ ಸಿಪ್ರಿಯಾನ್ ಮೊಂತೆರೋ (55)ಎಂದು ಗುರುತಿಸಲಾಗಿದೆ.

ಸಿಪ್ರಿಯಾನ್ ಸೋಮವಾರದಿಂದ ಮನೆಗೆ ಹೋಗದೇ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಹುಡುಕಾಡಿದಾಗ ದಾರಿ ಮಧ್ಯದ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಫ್ರೆಂಡ್ಸ್ ವಿಟ್ಲದ ಮುರುಳೀಧರ್ ವಿಟ್ಲ ತಂಡದಿಂದ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆತ್ತಲಾಯಿತು. ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!