ಉಪ್ಪಿನಂಗಡಿ ಲಾಠಿಚಾರ್ಜ್ ವಿಚಾರ:
ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಪತ್ರಿಕಾಗೋಷ್ಠಿ:
ಮಾನಭಂಗ ಮಾಡಿದ, ಕಲ್ಲೆಸೆದ ಸಿಸಿಟಿವಿ ಫೂಟೇಜ್ ಇದ್ದರೆ ರಿಲೀಸ್ ಮಾಡಿ
ಮಂಗಳೂರು: ನಿಮಗೆ ಧೈರ್ಯ ಇದ್ರೆ ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್ ವೇಳೆ ಪಿಎಫ್‌ಐನ ಕಾರ್ಯಕರ್ತರು ಪೊಲೀಸರ ಮಾನಭಂಗ ಮಾಡಿದ, ಕಲ್ಲೆಸೆದ ಸಿಸಿಟಿವಿ ಫೂಟೇಜ್ ಇದ್ದರೆ ರಿಲೀಸ್ ಮಾಡಿ ಮಿಸ್ಟರ್ ಎಸ್‌ಪಿ. ಐ ಚಾಲೆಂಜ್ ಯೂ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸವಾಲೆಸಿದಿದ್ದಾರೆ.
ನಗರದ ಖಾಸಗಿ ಹೋಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಪ್ಪಿನಂಗಡಿಯಲ್ಲಿ ನಡೆದ ತಲ್ವಾರ್ ದಾಳಿ ಪ್ರಕರಣದಲ್ಲಿ ಅಮಾಯಕ ಸ್ಥಳೀಯ ಪಿಎಫ್‌ಐ ನಾಯಕರನ್ನು ಬಂಧಿಸಿ ಬ್ಲಾಕ್ ಮೇಲ್ ತಂತ್ರ ನಡೆಸಿದ್ದಾರೆ. ನಮಗೆ ಮಹಿಳಾ ಪೊಲೀಸ್ ಮಾನಭಂಗದ ಸಿಸಿಟಿವಿ ವೀಡಿಯೋ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ ಅವರು ಸಿಸಿಟಿವಿ ಬಿಡುಗಡೆ ಮಾಡಿದರೆ ಪೊಲೀಸರು ಅರೋಪಿ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು. ಈ ಘಟನೆಯನ್ನು ಹೈಕೋರ್ಟ್‌ನ ಜಡ್ಜ್ ಮುಖಾಂತರ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ನಾವು ನಿಮ್ಮ ಲಾಠಿ ಏಟಿಗೆ ಹೆದರುವವರಲ್ಲ. ಇದನ್ನು ಕಾನೂನಿನ ಮೂಲಕವೇ ಎದುರಿಸುತ್ತೆವೆ. ಜೊತೆಗೆ ಬಂಧನದಲ್ಲಿರುವವರಿಗೆ ನೈತಿಕ ಬೆಂಬಲ ಸಲ್ಲಿಸುತ್ತೇವೆ ಎಂದರು.
ರಿಯಾಝ್ ಫರಂಗಿಪೇಟೆ ಮಾತನಾಡಿ, ಈ ಘಟನೆಯನ್ನು ಪೊಲೀಸರೇ ಕಮ್ಯೂನಲ್ ಮಾಡಿದ್ದಾರೆ. ಜೊತೆಗೆ ಈ ಘಟನೆಗೆ ಪತ್ರಕರ್ತರೂ ಕೋಮುಬಣ್ಣ ಬಳಿಯುತ್ತಿದ್ದಾರೆ. ಪತ್ರಿಕಾ ವರದಿಗಳು ಸಹ ಒನ್ ಸೈಡೆಡ್ ಅಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ನಡೆದ ನಂತರದಲ್ಲಿ ಪಿಎಫ್‌ಐ ಸಂಘಟಕರು ಎಸ್‌ಪಿ ಬಳಿ ಮಾತನಾಡುವಾಗ ಎಸ್ಪಿ ಹೇಳ್ತಾರೆ ಸಿಸಿಟಿವಿ ಹಾಳಾಗಿದೆ ಎಂದು. ಇಂತಹ ಷಡ್ಯಂತ್ರ ನಡೆಯುವಾಗವೇ ಸಿಸಿಟಿವಿ ಹಾಳಾಗುತ್ತದೆಯೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯ ವೇಳೆ ಅವರೇ ಲಾಠಿಚಾರ್ಜ್ ಮಾಡಿದ ನಂತರ ಎಸ್ ಐ ಪ್ರಸನ್ನ ಸ್ಟೇಷನ್ ಗೆ ಒಳಗೆ ಬಂದಾಗ ಯಾವುದೇ ಗಾಯ ಇರಲಿಲ್ಲ ಅನಂತರ ಗಾಯ ಎಲ್ಲಿಂದ ಬಂತು. ಇದೆಲ್ಲಾ ಕಟ್ಟು ಕಥೆ ಎಂದು ಹೇಳಿದರು.
ಡಿಸಿ ಕಾಲರ್ ಪಟ್ಟಿ ಹಿಡಯುತ್ತೆನೆ ಎನ್ನುವವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಸಲ್ಮಾನರಾದರೆ ಒಂದು ಕಾನೂನು ಬೇರೆ ಧರ್ಮದವರಾದರೆ ಬೆರೆ ಕಾನೂನಾ? ಈ ಹಿಂದೆ ಶಾಸಕ ಹರೀಶ್ ಪೂಂಜಾ ಬಂಧಿತ ಆರೋಪಿಗಳನ್ನು ಸ್ಟೇಷನ್ನಿಂದ ಎಳೆದುಕೊಂಡು ಹೋಗಿದ್ದಾರೆ. ಆಗ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ.
ಟಿ.ಡಿ ನಾಗರಾಜ್ ವಿರುದ್ಧ ಹರಿಹಾಯ್ದ ಮುಖಂಡರು
ಡಿವೈಎಸ್‌ಪಿ ಜೊತೆ ಸಂಘಟನೆಯ ನಾಯಕರು ಮಾತನಾಡಲು ಸ್ಟೇಷನೆ ಒಳಗೆ ಬಿಡದೇ ನಮ್ಮನ್ನು ಟಿ.ಡಿ ನಾಗರಾಜ್ ಅವಮಾನಿಸಿದ್ದಾರೆ. ನಂತರ ಡಿವೈಎಸ್‌ಪಿ ಜೊತೆ ಮಾತನಾಡುವಾಗ ‘ಸುಮ್ನೆ ಕೂತ್ಕೊಳ್ಳಯ್ಯಾ, ನಿಮ್ಮನ್ನೂ ಕೇಸ್ ಹಾಕಿ ಬಳ್ಳಾರಿ ಜೈಲಿಗೆ ಹಾಕುತ್ತೇವೆ ಎಂದು ವಿನಾಃಕಾರಣ ನಿಂದಿಸಿದ್ದಾರೆ. ನಂತರ ಡಿವೈಎಸ್‌ಪಿಯನ್ನು ಕರೆದುಕೊಂಡು ಹೋಗಿ ಏಕಾಏಕಿ ಲಾಠಿಚಾರ್ಜ್ ಮಾಡಿದ್ದಾರೆ. ಏಕಾಏಕಿ ಬೀದಿ ದೀಪ ಆರುತ್ತದೆ. ನಮ್ಮ ಧರ್ಮಗುರುಗಳ ತಲೆಗೆ ಬಲವಾದ ಅಯುಧದಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.





