December 12, 2024

30 ಲಕ್ಷ ರೂ. ದುರ್ಬಳಕೆ: ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು

0

ರಾಯಚೂರು: ನಿಯಮ ಬಾಹಿರವಾಗಿ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಹಾಗೂ ಕರ್ತವ್ಯ ಲೋಪ ಆರೋಪದ ಹಿನ್ನೆಲೆ ರಾಯಚೂರಿನ ದೇವದುರ್ಗದ ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ ಅವರನ್ನು ಅಮಾನತು ಮಾಡಲಾಗಿದೆ.

ದೇವದುರ್ಗದ ಊಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ಜಮೀನು ಖರೀದಿ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಹಟ್ಟಿ ಚಿನ್ನದ ಗಣಿ ಕಂಪನಿ ದೇಣಿಗೆ ರೂಪದಲ್ಲಿ 30 ಲಕ್ಷ ರೂ.ಯನ್ನು ನೀಡಿತ್ತು. ಆ ಹಣವನ್ನು ಸ್ವಂತ ಖಾತೆಗೆ ಜಮಾ ಮಾಡಿಕೊಂಡಿದಲ್ಲದೇ, ನಿಯಮ ಬಾಹಿರವಾಗಿ ಬಳಕೆ ಮಾಡಿದ್ದರು.

ಸರ್ಕಾರದಿಂದ ನೀಡಲಾದ ಮೊಬೈಲ್ ಸಂಖ್ಯೆ ಸದಾ ಸ್ವಿಚ್ಡ್ ಆಫ್ ಇಡುತ್ತಿದ್ದು, ಸಹ ಶಿಕ್ಷಕರು, ಸಾರ್ವಜನಿಕರಿಗೆ ಸರಿಯಾದ ರೀತಿ ಸ್ಪಂದನೆ ನೀಡುತ್ತಿರಲಿಲ್ಲ. ಈ ಆರೋಪಗಳ ಹಿನ್ನೆಲೆ ಬಿಇಓ ಸುಖದೇವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಇ

 

 

Leave a Reply

Your email address will not be published. Required fields are marked *

error: Content is protected !!