September 21, 2026

ಬಂಟ್ವಾಳ: ಪುರಸಭೆಯ ಮಾಜಿ ಅಧ್ಯಕ್ಷ ಶರೀಫ್ ಶಾಂತಿಅಂಗಡಿ ಆಡಿಯೋ ಸವಾಲು ಪ್ರಕರಣ: ಬಿಜೆಪಿ, ವಿಹಿಂಪ ಮುಖಂಡರ ವಿರುದ್ಧ ಸಮನ್ಸ್‌ ಜಾರಿ

0
image_editor_output_image1910463350-1733548633093.jpg

ಬಂಟ್ವಾಳ: ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಶರೀಫ್ ಶಾಂತಿಅಂಗಡಿ ಹಾಕಿರುವ ಸವಾಲಿನ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಸೆ. 16ರಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿ.ಸಿ. ರೋಡಿನಲ್ಲಿ ಜಮಾಯಿಸಿದ ವಿಚಾರಕ್ಕೆ ಸಂಬಂಧಿಸಿ ಮೂವರು ಮುಖಂಡರ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಿಂದ ಸಮನ್ಸ್‌ ಜಾರಿಯಾಗಿದೆ.

ಘಟನೆಗೆ ಸಂಬಂಧಿಸಿ ಈ ಹಿಂದೆ ವಿಹಿಂಪ ಮುಖಂಡರಾದ ಶರಣ್‌ ಪಂಪ್‌ವೆಲ್‌ ಹಾಗೂ ಭರತ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಬಿಜೆಪಿ ಮುಖಂಡರಾದ ವಿಕಾಸ್‌ ಪುತ್ತೂರು, ಆರ್‌. ಚೆನ್ನಪ್ಪ ಕೋಟ್ಯಾನ್‌ ಹಾಗೂ ವಿಹಿಂಪ ಮುಖಂಡ ಸಚಿನ್‌ ಮೆಲ್ಕಾರ್‌ ವಿರುದ್ಧ ಸಮನ್ಸ್‌ ಜಾರಿಯಾಗಿದೆ.

 

Leave a Reply

Your email address will not be published. Required fields are marked *

You may have missed

error: Content is protected !!