February 4, 2026

ಕಾಸರಗೋಡು: ವಿವಿಧೆಡೆ ಕಳವು ಆರೋಪಿಯ ಬಂಧನ

0
image_editor_output_image666920126-1732305779456.jpg

ಕಾಸರಗೋಡು: ಹಲವು ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಕೃಷ್ಣನಗರದ ಮುಹಮ್ಮದ್ ಅಶ್ರಫ್ ( 42) ಬಂಧಿತ ಆರೋಪಿ .ವರ್ಕಾಡಿ ಪರಿಸರದ ವ್ಯಾಪಾರ ಮಳಿಗೆ , ಆರಧಾನಾಲಯ ಮೊದಲಾದ ಕಡೆಗಳಿಂದ ಈತ ಕಳವು ನಡೆಸಿದ್ದನು.

ಕೆಲದಿನಗಳ ಹಿಂದೆ ವರ್ಕಾಡಿ ಬಜಿಲಕೇರಿಯ ಬಾಲ ಯೇಸು ಪ್ರಾರ್ಥನಾ ಮಂದಿರ , ಪಾವಳದ ಶ್ರೀ ಕೊರಗಜ್ಜ ಕಟ್ಟೆ ಯ ಕಾಣಿಕೆ ಹುಂಡಿ ಹಾಗೂ ಪಾಡಿ ಎಂಬಲ್ಲಿ ಅಂಗಡಿಗೆ ನುಗ್ಗಿ ಕಳವು ನಡೆಸಿದ್ದನು. ಈತ ಮಲಪ್ಪುರಂ ನಲ್ಲಿ ರುವುದಾಗಿ ಲಭಿಸಿದ ಖಚಿತ ಮಾಹಿತಿಯಂತೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!