February 4, 2026

ಪುತ್ತೂರು: ಕಾಂಗ್ರೇಸ್ ಮುಖಂಡನಿಗೆ ಚಪ್ಪಲಿಯಿಂದ ಹೊಡೆಯಲು ಬಂದ ಮಹಿಳೆ

0
image_editor_output_image-428009528-1732096899296.jpg

ಪುತ್ತೂರು: ಕಡಬ ತಾಲೂಕಿನ ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಾಪಿನ ಬಾಗಿಲು ಎಂಬಲ್ಲಿ ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಬುಧವಾರ ಕಡಬ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ತಹಶೀಲ್ದಾರ್ ಪರವಾಗಿ ಮಾತನಾಡಲು ಬಂದ ಆಗಮಿಸಿದ ಕಾಂಗ್ರೇಸ್ ಮುಖಂಡನಿಗೆ ಮಹಿಳೆಯೊಬ್ಬರು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಚಪ್ಪಲಿ ತೆಗೆದ ಘಟನೆ ನಡೆದಿದೆ.

ಸರಕಾರಿ ಜಾಗದಲ್ಲಿದ್ದ ವೃದ್ಧ ದಂಪತಿಗಳ ಮನೆ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ನೀತಿ ಟ್ರಸ್ಟ್ ಮತ್ತು ಸಂತ್ರಸ್ತ ಕುಟುಂಬ ಕಡಬ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದೆ. ವೃದ್ದ ದಂಪತಿ ನಜ್ಜುಗುಜ್ಜುಗೊಂಡ ಪಾತ್ರೆ ಪರಿಕರಗಳ ಜೊತೆ ಆಗಮಿಸಿ ಉರಿ ಬಿಸಿಲಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಾನ ಮನಸ್ಕರು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ. ಮನೆ ಕಳೆದುಕೊಂಡ ವೃದ್ದ ದಂಪತಿ ನನಗೆ ಜೀವ ಬೇಡ ಎಂದು ನೆಲದಲ್ಲಿ ಒದ್ದಾಡಿದ್ದು, ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿರುವುದು ಕಂಡು ಬಂತು.

Leave a Reply

Your email address will not be published. Required fields are marked *

error: Content is protected !!