ವಿಟ್ಲ: ಅಪ್ಪೇರಿಪಾದೆ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ನಮ್ಮ ವಿರೋಧವಿದೆ: ಕಾಮಗಾರಿ ಸ್ಥಗಿತ ಸೂಚನೆ ನೀಡಲಾಗಿದೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು
ವಿಟ್ಲ: ಅಪ್ಪೇರಿಪಾದೆ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಪಟ್ಟಣ ಪಂಚಾಯತಿ ಬೆಂಬಲ ಇಲ್ಲ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ತಿಳಿಸಿದರು. ವಿಟ್ಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಡಳಿತಾಧಿಕಾರಿ ಅವಧಿಯಲ್ಲಿ ಮಂಜೂರಾದ ಯೋಜನೆ ಅದು, ಆರಂಭಗೊಂಡ ಘಟಕ ನಿರ್ಮಾಣ ಕಾಮಗಾರಿಗೆ ಬೆಂಬಲ ಇಲ್ಲ ಎಂದರು
ಸ್ಥಳೀಯ ನಿವಾಸಿಗಳು ಘಟಕ ನಿರ್ಮಾಣದಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯತಿಗೆ ದೂರು ಮತ್ತು ಮನವಿ ಸಲ್ಲಿಸಿದ್ದಾರೆ. ಜನರ ಇಚ್ಛೆಗೆ ವಿರುದ್ಧವಾಗಿ ನಡೆಯುವುದಿಲ್ಲ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರು ತಿಳಿಸಿದರು. ಮಲತ್ಯಾಜ್ಯ ಘಟಕ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಗತ್ಯ ಇದೆ. ಆದರೆ ಜನರಿಗೆ ಸಮಸ್ಯೆ ಆಗದ ಸ್ಥಳವನ್ನು ಹುಡುಕಿ ನಿರ್ಮಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸದಸ್ಯರಾದ ರವಿಪ್ರಕಾಶ್ ವಿಟ್ಲ, ವಸಂತ ಉಪಸ್ಥಿತರಿದ್ದರು.




