February 4, 2026

1.49 ಕೋಟಿ ಹಣ ದುರುಪಯೋಗ: ಕೊಣನೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಮಾನತು

0
image_editor_output_image-635721852-1731748376847.jpg

ಹಾಸನ: ವಿವಿಧ ಯೋಜನೆಯಲ್ಲಿ 1.49 ಕೋಟಿ ಹಣ ದುರುಪಯೋಗಪಡಿಸಿಕೊಂಡ ಆರೋಪದಡಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದೆ.

ಬಿಎನ್ ಭುವನ್ ಅಮಾನತಾದ ಕಾರ್ಯದರ್ಶಿ. ಕೊಣನೂರು ಗ್ರಾ.ಪಂ. ಜೊತೆಗೆ ಗಂಗೂರು ಗ್ರಾ.ಪಂ. ಪ್ರಭಾರ ಕಾರ್ಯದರ್ಶಿಯಾಗಿದ್ದ ಬಿ.ಎನ್.ಭುವನ್ ಹದಿನೈದನೇ ಹಣಕಾಸು, ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ, ಸಿಬ್ಬಂದಿ ವೇತನ ಖಾತೆ, ಗ್ರಾಮ ವಿಕಾಸ ಯೋಜನೆಯಲ್ಲಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!