March 18, 2026

ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಅಗ್ನಿ ಸುರಕ್ಷತೆ ಮತ್ತು ಆರೋಗ್ಯ ಸುರಕ್ಷತೆಯ ಬಗ್ಗೆ ಕಾರ್ಯಗಾರ

0
image_editor_output_image307444371-1731578196129

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಅಗ್ನಿ ಸುರಕ್ಷತೆ, ಆರೋಗ್ಯ ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ತರಬೇತುದಾರರಾಗಿ ಆಗಮಿಸಿದ್ದ ಮಂಗಳೂರಿನ ಓಷ ಕಾರ್ಡ್ ಪಡೆದಿರುವ ಫೈಯರ್ ಅಂಡ್ ಸೇಫ್ಟಿ ಆಫೀಸರ್ ಸತ್ಯ ರಾಜ್ ರವರು ಮಕ್ಕಳಿಗೆ ಶಿಕ್ಷಕರಿಗೆ ಮತ್ತು ಪೋಷಕರಿಗೆ ಅಗ್ನಿ ದುರಂತ ರಸ್ತೆ ಅಪಘಾತ ಹೀಗೆ ಹಲವು ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಅಗ್ನಿ ಸುರಕ್ಷತೆ ಕ್ರಮಗಳು ಮತ್ತು ತುರ್ತು ಪ್ರಥಮ ಚಿಕಿತ್ಸೆಯ ವಿಧಗಳನ್ನು ಮೌಕಿಕ ತರಬೇತಿ ಮತ್ತು ಪ್ರಾಯೋಗಿಕ ತರಬೇತಿಯೊಂದಿಗೆ ವಿವರಿಸಿ ಕೊಟ್ಟರು‌. ಅಣಕು ಅಗ್ನಿ ದುರಂತವನ್ನು ಸೃಷ್ಟಿಸಿ ಅದರಿಂದ ಹೊರಬರುವುದನ್ನು ಮತ್ತು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸವಿವರವಾಗಿ ತಿಳಿಸಿದರು.

ಕಾರ್ಯಗಾರದಲ್ಲಿ ಮಕ್ಕಳು ಪೋಷಕರು ಮತ್ತು ಶಿಕ್ಷಕರು ಭಾಗವಹಿಸಿದ್ದು, ತರಬೇತಿಯ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದ ಸಮಾರೋಪದಲ್ಲಿ ಶಾಲೆಯ ಪ್ರಾಂಶುಪಾಲರಾದ ಲಿಬಿನ್ ಸೇವಿಯರ್ ರವರು ಮಾತನಾಡಿ ಮಕ್ಕಳಿಗೆ ಸುರಕ್ಷಿತವಾಗಿರುವಂತೆ ತಿಳಿಸಿ ತರಬೇತಿ ನಡೆಸಿಕೊಟ್ಟ ಫೈರ್ ಅಂಡ್ ಸೇಫ್ಟಿ ಆಫೀಸರ್ ಸತ್ಯ ರಾಜ್ ರವರಿಗೆ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!