ವಿಟ್ಲ: ವಿಠ್ಠಲ್ ಜೇಸಿ ಶಾಲೆ: ವಾರ್ಷಿಕ ಕ್ರೀಡೋತ್ಸವ
ವಿಟ್ಲ: “ಕ್ರೀಡೆಯಲ್ಲಿ, ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ಏಕೈಕ ಮಾರ್ಗವೆಂದರೆ ಕಠಿಣ ಪರಿಶ್ರಮ, ನಿರಂತರತೆ ಮತ್ತು ನಮ್ಮಲ್ಲಿನ ಅಚಲವಾದ ನಂಬಿಕೆ. ಹಾಗೆಂದು ಸೋಲು ಗೆಲುವಿನ ಸೋಪಾನ ” ಎನ್ನುತ್ತಾ ವಿಟ್ಲ ಬಸವನ ಗುಡಿಯಲ್ಲಿರುವ ವಿಠ್ಠಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿದ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆಯ ದೈಹಿಕ ಶಿಕ್ಷಕ ಅಶೋಕ ಭಟ್ ಶುಭ ಹಾರೈಸಿದರು.



ಕ್ರೀಡೋತ್ಸವದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಧ್ಯಕ್ಷ ಶ್ರೀಧರ ಶೆಟ್ಟಿ ಮಕ್ಕಳ ಕ್ರೀಡಾ ಸ್ಪೂರ್ತಿ ಅನಾವರಣ ಗೊಳ್ಳಲಿ ಎಂದು ಶುಭಂಸನೆಗೈದರು. ಸಂಸ್ಥೆಯ ಕಾರ್ಯದರ್ಶಿ ಮೋಹನ ಎ, ನಿರ್ದೇಶಕರಾದ ಹಸನ್ ವಿಟ್ಲ, ಸಂತೋಷ್ ಶೆಟ್ಟಿ, ಆಡಳಿತಾಧಿಕಾರಿ ರಾಧಾಕೃಷ್ಣ ಎ, ಪ್ರಾಂಶುಪಾಲ ಜಯರಾಮ ರೈ, ಉಪಾಪ್ರಾಂಶುಪಾಲೆ ಜ್ಯೋತಿ ಶೆಣೈ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು. ಶಾಲಾ ದೈಹಿಕ ಶಿಕ್ಷಕರಾದ ಭಾನುಪ್ರಕಾಶ್ ಹಾಗೂ ಶಶಿಕಲಾ ಕಾರ್ಯಕ್ರಮ ಸಂಯೋಜಿಸಿದರು. ಸಹಶಿಕ್ಷಕಿ ಲಾವಣ್ಯ ನಿರೂಪಿಸಿದರು. ಆಕರ್ಷಕ ಪಥಸಂಚಲನ ಎಲ್ಲರನ್ನು ಆಕರ್ಷಿಸಿತು.




