March 18, 2026

ನಟ ವಿಜಯ್ ನೆರವಿನಿಂದ ಶ್ಯೂರಿಟಿ ಪಡೆದು ಬಿಡುಗಡೆಯಾಗಿದ್ದ ಆರೋಪಿಯಿಂದ ಮತ್ತೆ ಜೋಡಿ ಕೊಲೆ

0
image_editor_output_image-382070095-1731356636859.jpg

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ನೆರವಿನಿಂದ ಶ್ಯೂರಿಟಿ ಪಡೆದು ಬಿಡುಗಡೆಯಾಗಿದ್ದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸುರೇಶ್ ಇದೀಗ ಮತ್ತೆ ಜೋಡಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ.

ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ‘ಈ ಹಿಂದೆ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದ ಸುರೇಶ್ ಮತ್ತೆರಡು ಕೊಲೆ ಮಾಡಿ ಮತ್ತೆ ಜೈಲುಪಾಲಾಗಿದ್ದಾನೆ. ನವೆಂಬರ್ 8ರಂದು ಬೆಂಗಳೂರಿನ ಹೊರವಲಯದ ಬಾಗಲೂರಿನಲ್ಲಿ ಜೋಡಿ ಕೊಲೆ ನಡೆದಿದೆ.

ಎಸ್ಆರ್ಎಸ್ ಟ್ರಾವೆಲ್ಸ್ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಕೊಲೆಯಾಗಿದ್ದು, ಈ ಕೊಲೆಗಳನ್ನು ಸುರೇಶ್ ಮಾಡಿದ್ದಾನೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!