ಕಾರಿನೊಳಗೆ ಉಸಿರುಗಟ್ಟಿ 3 ವರ್ಷದ ಬಾಲಕ ಮೃತ್ಯು
ಉತ್ತರ ಪ್ರದೇಶ: ಮೂರು ವರ್ಷದ ಕಂದಮ್ಮ ಕಾರಿನೊಳಗೆ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮೀರತ್‌ನ ಕಂಕೇರಖೇಡದಲ್ಲಿ ಅಕ್ಟೋಬರ್ 30 ರಂದು ನಡೆದಿದೆ. ವರದಿಯಾದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಮೂರು ವರ್ಷದ ವರ್ತಿಕಾ ಮೃತ ಬಾಲೆ. ಮಗುವಿನ ತಂದೆ ಮತ್ತು ಆರೋಪಿ ಇಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪರಸ್ಪರ ಪರಿಚಿತರು.
ಮಂಗಳವಾರದಂದು ಬಾಲಕಿಯ ತಂದೆ, ಯೋಧ ಲ್ಯಾನ್ಸ್ ನಾಯಕ್ ನರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಆತನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರು ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.





