ಪುತ್ತೂರು: ತಲವಾರು ತೋರಿಸಿ ನಗ-ನಗದು ನೀಡುವಂತೆ ಬೆದರಿಕೆ ಹಾಕಿದ್ದಾಗಿ ಪೊಲೀಸರಿಗೆ ಸುಳ್ಳುಹೇಳಿ ಸಿಕ್ಕಿಬಿದ್ದ ಮಹಿಳೆ
ಪುತ್ತೂರು: ಚಡ್ಡಿ ಗ್ಯಾಂಗ್ ದರೋಡೆಕೋರರು ಮಂಗಳವಾರ ರಾತ್ರಿ ನನ್ನ ಮನೆಗೆ ಬಂದು ತಲವಾರು ತೋರಿಸಿ ನಗ-ನಗದು ನೀಡುವಂತೆ ಬೆದರಿಕೆ ಒಡ್ಡಿದ್ದು, ಈ ವೇಳೆ ನಾನು ತಪ್ಪಿಸಿಕೊಂಡು ಕಿಟಕಿಯ ಮೂಲಕ ತೆಗೆದಿದ್ದೇನೆ ಎನ್ನಲಾದ ಫೋಟೋವೊಂದನ್ನು ಮಹಿಳೆ ವೈರಲ್ ಮಾಡಿದ್ದು, ಪರಿಣಾಮ ಕೆಯ್ಯೂರು ಗ್ರಾಮದೆಲ್ಲೆಡೆ ಆತಂಕ ಮನೆ ಮಾಡಿ ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ಸಂದರ್ಭ ಮಹಿಳೆಯ ಕಟ್ಟುಕಥೆ ಬೆಳಕಿಗೆ ಬಂದಿದೆ. ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ್ದು ಕೇರಳ ಮೂಲದಿಂದ ಬಂದು ನೆಲೆಸಿರುವ ಮಾರ್ಗರೇಟ್. ಈ ರೀತಿ ಸುಳ್ಳು ಕಥೆ ಹೆಣೆದದ್ದು ಏಕೆ ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಪುತ್ತೂರು ಗ್ರಾಮಾಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.





