ಎಸ್ಎಮ್ಎ ಮುಡಿಪು ರೀಜಿನಲ್ ಸಮಿತಿಯ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ಮುಡಿಪು : ಮೊಹಲ್ಲಾ ಮತ್ತು ಮದ್ರಸ ಸಬಲೀಕರಣದ ಕಡೆ ಹೆಚ್ಚಿನ ಆದ್ಯತೆ ನೀಡುತ್ತಾ, ಪವಿತ್ರ ಇಸ್ಲಾಮಿನ ಆಶಯಾದರ್ಶಗಳಡಿಯಲ್ಲಿ ಕಾರ್ಯಾಚರಿಸುವ ಸುನ್ನೀ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ SMA ಇದರ ಮುಡಿಪು ಪ್ರಾದೇಶಿಕ ಸಮಿತಿಯ ವಾರ್ಷಿಕ ಮಹಾಸಭೆಯು 2024 ನವೆಂಬರ್ 3 ಭಾನುವಾರದಂದು ಇಲ್ಲಿಗೆ ಸಮೀಪದ ಸಂಬಾರತೋಟ ಸಲಾಹುದ್ದೀನ್ ಹೈಯರ್ ಸೆಕೆಂಡರಿ ಮದ್ರಸ ಹಾಲ್ ನಲ್ಲಿ ಸ್ಥಳೀಯ ಇಮಾಮರಾದ ಹಾಫಿಳ್ ಅಬ್ದುಲ್ ರಝಾಕ್ ಝುಹ್ರಿರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಸಂಘಟನೆಯ ಅಧ್ಯಕ್ಷರಾದ ಯುಕೆ ಹಸೈನಾರ್ ಹಾಜಿ ಪರಪ್ಪುರವರು ಸಭಾಧ್ಯಕ್ಷರಾಗಿದ್ದರು.
ಸುನ್ನೀ ಜಮ್ಇಯ್ಯತುಲ್ ಮುಅಲ್ಲಿಮೀನ್ ಮುಡಿಪು ರೇಂಜ್ ಅಧ್ಯಕ್ಷರಾದ ಅಲ್ಹಾಜ್ ಮುಹ್ಯಿದ್ದೀನ್ ಕಾಮಿಲ್ ಸಖಾಫಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾಸಭೆಯ ವೀಕ್ಷಕರಾಗಿ ಮೇಲ್ಕಟ್ಟಕದಿಂದ ಆಗಮಿಸಿದ ಹೈದರ್ ಹಿಮಮಿಯವರು ತರಗತಿ ನಡೆಸಿಕೊಟ್ಟರು.ರೇಂಜ್ ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಹಾರಿಸ್ ಹನೀಫೀ ಇರಾಮೂಲೆ, ಕೋಶಾಧಿಕಾರಿ ಅಲ್ಹಾಜ್ ಕೆಬಿ ಅಬ್ದುರಹ್ಮಾನ್ ಮದನಿ, ಮೂಸಾ ಹಾಜಿ ಸಂಬಾರತೋಟ, ಅಬ್ಬು ಹಾಜಿ ಮದ್ಯನಡ್ಕ, ಮುಹಮ್ಮದ್ ಹಾಜಿ ಬಾಳೆಪುಣಿ ಮಾತನಾಡಿದರು.
ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಝೋನಲ್ ಅಧ್ಯಕ್ಷಾರಾದ ಕೆಪಿ ಅಬೂಬಕರ್ ಹಾಜಿ ಮೊಂಟೆಪದವುರವರು ನಾಯಕತ್ವ ನೀಡಿದರು.

ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್- ಎಸ್ಎಂಎ ಮುಡಿಪು ರೀಜಿನಲ್
_ನೂತನ ಸಾರಥಿಗಳು_
ಅಧ್ಯಕ್ಷರು : ಯುಕೆ ಹಸೈನಾರ್ ಹಾಜಿ ಪರಪ್ಪು
ಪ್ರಧಾನ ಕಾರ್ಯದರ್ಶಿ : ಎಂಕೆಎಂ ಹನೀಫ್ ಕಾಮಿಲ್ ಸಖಾಫಿ ಅಲ್ ಅರ್ಶದಿ ಕಾಯಾರ್
ಕೋಶಾಧಿಕಾರಿ : ಅಬೂಬಕರ್ ಹಾಜಿ ಮದ್ಯನಡ್ಕ
ವಖಫ್ ವಿಭಾಗ :
ಉಪಾಧ್ಯಕ್ಷರು : ಅಬೂಬಕರ್ ಹಾಜಿ ಕಾಯಾರ್
ಕಾರ್ಯದರ್ಶಿ :
ಅಬ್ದುರ್ರಹ್ಮಾನ್ ಹಾದಿ, ಸಿಎಂನಗರ
ಕ್ಷೇಮನಿಧಿ ವಿಭಾಗ :
ಉಪಾಧ್ಯಕ್ಷರು : ಹಬೀಬುರಹ್ಮಾನ್ ಸಂಪಿಲ
ಕಾರ್ಯದರ್ಶಿ : ಸಿಐ ಅಬ್ದುರ್ರಹ್ಮಾನ್ ಮುದುಂಗಾರು
ಸಂಘಟನಾ ವಿಭಾಗ :
ಉಪಾಧ್ಯಕ್ಷರು : ಎಂಎಂಕೆ ಮುಹಮ್ಮದ್ ರಶಾದಿ ಮೂಳೂರು
ಕಾರ್ಯದರ್ಶಿ : ಮುಹಮ್ಮದ್ ಹನೀಫ್ ಕಾಮಿಲ್ ಸಖಾಫಿ ಪರಪ್ಪು.
ಕಾರ್ಯಕಾರಿ ಸಮಿತಿ ಸದಸ್ಯರು : ಸಯ್ಯಿದ್ ಜಲಾಲುದ್ದೀನ್ ತಂಙಳ್ ಎಜ್ಯುಪಾರ್ಕ್, ಯುಕೆ ಅಬೂಬಕರ್ ಮದನಿ ಮುದುಂಗಾರು, ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಸಿಎಂ ನಗರ, ಕೆಬಿ ಅಬ್ದುಲ್ ರಹ್ಮಾನ್ ಮದನಿ ಮದ್ಯನಡ್ಕ, ಹಾರಿಸ್ ಹನೀಫೀ ಇರಾಮೂಲೆ, ಮುಹಮ್ಮದ್ ಹಾಜಿ ಹಿದಾಯತ್ ನಗರ, ಎಸ್ಎಸ್ ಮೂಸಾ ಹಾಜಿ ಸಂಬಾರತೋಟ, ರಫೀಕ್ ಅಮ್ಜದಿ ಸಂಬಾರತೋಟ, ಅಬ್ದುಲ್ ಅಝೀಝ್ ಅಮ್ಜದಿ ಮೂಳೂರು, ಉಸ್ಮಾನ್ ಹಾಜಿ ಮೂಳೂರು, ಯೂಸುಫ್ ಎಂಕೆ ಇರಾಮೂಲೆ, ಇಬ್ರಾಹೀಂ ಪಾನೇಲ, ಎಸ್ಎ ಅಬ್ದುಲ್ಲಾ ಪರಪ್ಪು, ಹಂಝ ಝುಹ್ರಿ ಪಾನೇಲ, ಅಬ್ದುಲ್ ಖಾದರ್ ಸಖಾಫಿ ಕಡ್ವಾಯಿ, ಅಬ್ಬಾಸ್ ಜಿ ಕಡ್ವಾಯಿ, ಉಸ್ಮಾನ್ ತಚ್ಚಾಲ್ ಕಾಯಾರ್, ಬಿಎಂ ಇಬ್ರಾಹೀಂ ಸಖಾಫಿ ಅಲ್ ಮದೀನಾ, ಅಬ್ದುಲ್ ಹಮೀದ್ ಮದನಿ ಸಂಪಿಲ, ಅಬ್ದುಲ್ಲಾ ಪಿ ಇರಾಸಂಪಿಲ, ಝೈನುದ್ದೀನ್ ಇರಾಸೈಟ್, ಹಸನ್ ಅಹ್ಸನಿ ಇರಾಸೈಟ್, ಯಾಕೂಬ್ ಲತೀಫೀ ಮುಡಿಪು, ಅಬ್ದುಲ್ ಮಜೀದ್ ಬಿಕೆ ಮುಡಿಪು, ಆಸಿಫ್ ಕೆ ಎಂ ಮದ್ಯನಡ್ಕ, ಅಬೂಬಕರ್ ಎಂ ಸಿಎಂನಗರ, ಝಕರಿಯ್ಯ ಸಖಾಫಿ ಮುದುಂಗಾರು, ಉಮರ್ ಕುಂಞಿ ನಾರ್ಯ, ಅಶ್ರಫ್ ಕೆಕೆ ಮುಡಿಪು, ಅಬ್ದುಲ್ ರಝಾಕ್ ಮುಸ್ಲಿಯಾರ್ ಪಾನೇಲ, ಮೊಯ್ದಿನ್ ಕುಂಞಿ ಇರಾಮೂಲೆ, ಎಸ್ ಯಾಕೂಬ್ ಸಂಬಾರತೋಟ, ಉಸ್ಮಾನ್ ಪಿಬಿ ಸಿಎಂ ನಗರ, ಮುಹಮ್ಮದ್ ಪರಪ್ಪು.
ಅಗಲಿದ ಮಹಾನ್ ನಾಯಕರ ಅನುಸ್ಮರಣಾ ಸಂಗಮಕ್ಕೆ ಸಯ್ಯಿದ್ ಜಲಾಲುದ್ದೀನ್ ತಂಙಳ್ ಸಿಎಂನಗರರವರು ನೇತೃತ್ವ ನೀಡಿದರು.
ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಕಾಮಿಲ್ ಸಖಾಫಿ ಪರಪ್ಪು ಸ್ವಾಗತಿಸಿ, ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಎಂಕೆಎಂ ಹನೀಫ್ ಕಾಮಿಲ್ ಸಖಾಫಿ ಅಲ್ ಅರ್ಶದಿಯವರು ಧನ್ಯವಾದ ಸಲ್ಲಿಸಿದರು. ಅಬ್ದುರ್ರಹ್ಮಾನ್ ಹಾದಿ ಸಿಎಂ ನಗರರವರು ಕಾರ್ಯಕ್ರಮ ನಿರ್ವಹಿಸಿದರು.





