March 22, 2026

ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಸಹಿತ ನಾಲ್ವರು ಪ್ರವಾಸಿಗರ ರಕ್ಷಣೆ

0
image_editor_output_image2042115264-1730786501037.jpg

ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಹಾಗೂ ಬೆಂಗಳೂರು ಮೂಲದ ನಾಲ್ವರು ಪ್ರವಾಸಿಗರ ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನವೆಂಬರ್ 1ರಂದು ನಡೆದಿದೆ.

ಬೆಂಗಳೂರಿನಿಂದ ಬಂದಿದ್ದ ಇವರು ಸಮುದ್ರದಲ್ಲಿ ಈಜುವಾಗ ಸುಳಿಗೆ ಸಿಕ್ಕಿದ್ದು ರಕ್ಷಣೆಗಾಗಿ ಕೂಗಿದ್ದಾರೆ. ಈ ವೇಳೆ ಸ್ಥಳೀಯ ಅಡ್ವೆಂಚರ್ಸ್ ಬೋಟ್‌ನಲ್ಲಿ ಲೈಫ್‌ಗಾರ್ಡ್‌ಗಳಾದ ನಾಗೇಂದ್ರ, ಮಂಜುನಾಥ್ ಹರಿಕಾಂತ್ರ, ಶೇಖರ್ ಹರಿಕಾಂತ್ರ ಅವರು ರಕ್ಷಣೆ ಮಾಡಿದ್ದಾರೆ.

ರಷ್ಯಾ ಮೂಲದ ಜೈನ್ (41) , ಬೆಂಗಳೂರಿನ ಎಬಿನ್ ಡೇವಿಡ್ (35), ಮಧುರ ಅಗರ್ವಾಲ್ (35), ರಮ್ಯ ವೆಂಕಟರಮಣ (34) ರಕ್ಷಣೆಗೊಳಗಾದವರು.

ಗೋಕರ್ಣ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ ಸಮುದ್ರದಲ್ಲಿ ಸುಳಿಗೆ ಸಿಲುಕಿ ಮುಳುಗುತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಗೋಕರ್ಣದ ಓಂ ಬೀಚ್‌ನಲ್ಲಿ ನಡೆದಿದೆ.

ಆಂದ್ರ ಮೂಲದ ಚರಣ್ (23), ಶ್ರೀಕಾಂತ್ (26) ರಕ್ಷಣೆಗೆ ಒಳಗಾದ ಪ್ರವಾಸಿಗರು. ಆಂಧ್ರದ ಕಡಪ ಜಿಲ್ಲೆಯವರಾಗಿದ್ದು, ನಾಲ್ಕು ಜನ ಪ್ರವಾಸಿಗರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು.

Leave a Reply

Your email address will not be published. Required fields are marked *

error: Content is protected !!