ಕೊಡಂಗಾಯಿ ಟೀಮ್ ಎಮರ್ಜೆನ್ಸಿ ವತಿಯಿಂದ ರಕ್ತದಾನ ಶಿಬಿರ

,ವಿಟ್ಲ: ಕೊಡಂಗಾಯಿ ಟೀಮ್ ಎಮರ್ಜೆನ್ಸಿ ವತಿಯಿಂದ ರಕ್ತದಾನ ಶಿಬಿರವು 03-11-2024.
ಮರ್ಹೂಂ ಫಾರೂಕ್ ಎಂ ಕೆ ಹಾಗೂ ಮಹಮ್ಮದ್ ಮೋನು ಬಿಕ್ನಾಜೆ ಸ್ಮರಣಾರ್ಥ ಟೀಮ್ ಎಮರ್ಜೆನ್ಸಿ ಕೊಡಂಗಾಯಿ ಮತ್ತು ಮರ್ಹಬಾ ಕಮ್ಯುನಿಟಿ ಟ್ರಸ್ಟ್ ವತಿಯಿಂದ ಲಯನ್ಸ್ ಕ್ಲಬ್ ವಿಟ್ಲ ಸಿಟಿ,ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಸಹಯೋಗದಲ್ಲಿ ಅಕ್ಷಯ ಬ್ಲಡ್ ಡೋನರ್ಸ್ ಇದರ 34ನೇ ರಕ್ತದಾನ ಶಿಬಿರವು ವಿಟ್ಲ ಪಡ್ನೂರು ಸಮುದಾಯ ಭವನದಲ್ಲಿ ನಡೆಯಿತು.
ಮುಹ್ಯದ್ದೀನ್ ಜುಮಾ ಮಸೀದಿಯ ಖತೀಬ್ ಬಿ ಎ ಸಿದ್ದೀಕ್ ಅರ್ಷದಿ ಉಸ್ತಾದರು ದುವಾದೊಂದಿಗೆ ಉದ್ಘಾಟಿಸಿದರು.
ಹಮೀದ್ ಟಿ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ವಲಯಾದ್ಯಕ್ಷರಾದ ಸಂದೇಶ್ ಶೆಟ್ಟಿ ಬಿಕ್ನಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು .
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್ ಪೂರ್ಲಪ್ಪಾಡಿ, ಸದಸ್ಯರಾದ ರವೀಶ್ ಶೆಟ್ಟಿ ಕರ್ಕಳ, ನಾಗೇಶ್ ಶೆಟ್ಟಿ, ಮಹಮೂದ್ ಕಡಂಬು, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಕೆ ಬಾಬು ವಿಟ್ಲ,ಲಯನ್ಸ್ ವಲಯಾಧ್ಯಕ್ಷ ಸುದೇಶ್ ಭಂಡಾರಿ ಎರ್ಮನಿಲೆ,ಎಂ ಜೆ ಎಂ ಅಧ್ಯಕ್ಷ ಅಬ್ದುಲ್ ಕುಂಞ ಮೂರ್ಜೆಬೆಟ್ಟು, ಅಬೂಬಕರ್ ವಕೀಲರು, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ವಸಂತ್ ಶೆಟ್ಟಿ ಎರ್ಮನಿಲೆ,ಅಕ್ಷಯ ಬ್ಲಡ್ ಡೋನರ್ಸ್ ಅಧ್ಯಕ್ಷ ಝ್ಹಕರಿಯ ನಾರ್ಶ,ಕೋಶಾಧಿಕಾರಿ ಕೆ ಎಂ ಲತೀಫ್ ಪರ್ತಿಪ್ಪಾಡಿ, ಇಬ್ರಾಹಿಂ ಕರೀಂ ಸಂಚಾರಕರು, ಅಬ್ದುಲ್ ರಹಿಮಾನ್ ಮೇಲಂಗಡಿ, ಹಕೀಮ್ ಪರ್ತಿಪ್ಪಾಡಿ, ಇಬ್ರಾಹಿಂ ಝೈನಿ, ಅಬ್ದುಲ್ ಕುಂಞ,ನೌಷಾದ್, ಜಬ್ಬಾರ್,ರಹೀಮ್,ಅಝ್ಹರುದ್ದೀನ್,ಫಯಾಝ್ ಮುಂತಾದವರು ಬಾಗವಹಿಸಿದರು.
ಎಲ್ಲಾ ರಕ್ತದಾನಿಗಳನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕೆ.ಎಂಎ.ಕೊಡಂಗಾಯಿ ಸ್ವಾಗತಿಸಿದರು
ಅಬ್ದುಲ್ ಮಜೀದ್ ಟಿ ಎಂ ವಂದಿಸಿದರು.

