ಸಾಲವನ್ನು ತೀರಿಸಲು ಸ್ವಂತ ಮಗುವನ್ನೆ 9 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪೋಷಕರು
ಬಿಹಾರ: ಬಡತನದಿಂದ ಬಳಲುತ್ತಿರುವ ಮಹಿಳೆಯೊಬ್ಬರು ತನ್ನ ಬ್ಯಾಂಕ್ ಸಾಲವನ್ನು ತೀರಿಸಲು ಸ್ವಂತ ಮಗುವನ್ನೆ ಕೇವಲ 9 ಸಾವಿರಕ್ಕೆ ಮಾರಾಟ ಮಾಡಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರು ಮಗುವನ್ನು ಮಹಿಳೆಯ ಸಂಬಂಧಿಕರ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಮಗುವನ್ನು ಬೆಂಗಳೂರು ಮೂಲದ ಮಕ್ಕಳಿಲ್ಲದ ತಾಯಿಯೊಬ್ಬರಿಗೆ ಹಸ್ತಾಂತರಿಸುವ ಮೊದಲು ಅಲ್ಲಿ ಇರಿಸಲಾಗಿತ್ತು. ಮಗುವಿನ ಹುಡುಕಾಟದಲ್ಲಿದ್ದ ಅವರು ಮಗುವಿಗೆ ಬದಲಾಗಿ 2 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು ಎಂದು ವರದಿ ಹೇಳಿದೆ.
ಮಗುವಿನ ಪೋಷಕರಾದ ಮೊಹಮ್ಮದ್ ಹಾರೂನ್ ಮತ್ತು ರೆಹಾನಾ ಖಾತೂನ್ ಅವರು ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಅವರ ಮಗುವನ್ನು ಶನಿವಾರ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ಮಗುವಿನ ತಾಯಿ ರೆಹಾನಾ ಖಾತೂನ್ ಅವರ ಸಹೋದರ ತನ್ವೀರ್ ಎಂಬಾತ ಮಗುವನ್ನು ಗ್ರಾಮಸ್ಥರಾದ ಮೊಹಮ್ಮದ್ ಆರಿಫ್‌ಗೆ ಮಾರಾಟ ಮಾಡಿದ್ದು, ಭಾನುವಾರ 9,000 ರೂ. ನೀಡಿದ್ದನು. ತನ್ವೀರ್ ತನ್ನ ಮಗನನ್ನು ಮಾರಾಟ ಮಾಡಿ ಆರೀಫ್‌ನಿಂದ ಎಷ್ಟು ಹಣ ಪಡೆದಿದ್ದಾನೆ ಎಂಬ ಬಗ್ಗೆ ತನಗೆ ತಿಳಿದಿಲ್ಲ ಎಂದು ಮಗುವಿನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಅದಾಗ್ಯೂ, ಮಗುವನ್ನು ಪಡೆದ ಆರೀಫ್ ಅವರ ಸಂಬಂಧಿಕರು ಮಗುವಿಗಾಗಿ ಆತ 45 ಸಾವಿರ ನೀಡಿದ್ದಾಗಿ ವರದಿಯಾಗಿದೆ.