ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೃದ್ದಿಮಾನ್ ಸಹಾ
ಹೊಸ ದೆಹಲಿ: ಭಾರತ ಕ್ರಿಕೆಟ್ ತಂಡದ ಹಿರಿಯ ವಿಕೆಟ್ ಕೀಪರ್, ಬ್ಯಾಟರ್ ವೃದ್ಧಿಮಾನ್ ಸಹಾ, ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ನನ್ನ ಕೊನೆಯ ಸರಣಿ ಎಂದು ಹೇಳಿದ್ದಾರೆ.
2014ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಹಾ, 40 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮನ್ ಸಹಾ ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿದ್ದು, ಇದೇ ನನ್ನ ಕೊನೆಯ ಸೀಸನ್ ಆಗಿರಲಿದೆ, ಅಲ್ಲದೆ ಬಂಗಾಳ ತಂಡವನ್ನು ಪ್ರತಿನಿಧಿಸಿರುವ ಗೌರವ ನನಗಿದೆ. ನಿವೃತ್ತಿಗೂ ಮುನ್ನ ರಣಜಿ ಟ್ರೋಫಿಯಲ್ಲಿ ಮಾತ್ರ ಆಡುವೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಪ್ರಸಕ್ತ ರಣಜಿ ಋತುವನ್ನು ಸ್ಮರಣೀಯವಾಗಿಸೋಣ ಎಂದು ತಿಳಿಸಿದ್ದಾರೆ.
ಭಾರತದ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಬಹಳ ಸಮಯದಿಂದ ಗುರುತಿಸಿಕೊಂಡಿರುವ ಸಹಾ ಅವರನ್ನು ಕಳೆದ ವರ್ಷ ಬಿಸಿಸಿಐನ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಬಿಡುಗಡೆ ಮಾಡಲಾಗಿತ್ತು.