ವಿಠ್ಠಲ್ ಜೇಸಿ ಶಾಲೆ : ಕನ್ನಡ ರಾಜ್ಯೋತ್ಸವ ಸಂಭ್ರಮ

ಮನಸ್ಸಿನ ಭಾವಗಳನ್ನು ವ್ಯಕ್ತಪಡಿಸಲಾಗುವ ಶುದ್ಧ ಭಾಷೆಯಾಗಿದ್ದು ’ ಅಮ್ಮ’ ಎನ್ನುವ ಪವಿತ್ರ ಪದವಿರುವ ಕನ್ನಡ ಎಂದೆಂದಿಗೂ ಶ್ರೇಷ್ಠ” ವಾಗಿರುವುದು ಎಂಬ ಉತ್ಸಾಹದ ಮಾತುಗಳನ್ನು ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ವಿಠಲ ನಾಯಕ್ ಬೊಳಂತಿಮೊಗರು ವಿವರಿಸಿದರು.
ಅವರು ವಿಟ್ಲ ಬಸವನಗುಡಿಯಲ್ಲಿರುವ ವಿಠ್ಠಲ್ ಜೇಸಿ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಕನ್ನಡ ರಾಜ್ಯೋತ್ಸವ ಸಂಭ್ರಮದ ಅತಿಥಿಗಳಾಗಿದ್ದರು. 2023-24 ಕನ್ನಡ ರಾಜ್ಯೋತ್ಸವ ಆಚರಣೆಯ 50ನೇ ಸಂಭ್ರಮ ವರ್ಷವಾಗಿದ್ದು, ಸಮಾರೋಪ ಸಮಾರಂಭವನ್ನು ಸರ್ಕಾರದ ಆದೇಶದನ್ವಯ ಅನುಸರಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಶುಭಾoಸನೆಗೈದರು. ಉಪಾಧ್ಯಕ್ಷರಾದ ರಾಧಾಕೃಷ್ಣ ಪೈ, ನಿರ್ದೇಶಕರಾದ ಹಸನ್ ವಿಟ್ಲ, ಸಂತೋಷ್ ಶೆಟ್ಟಿ ಪೆಲತಡ್ಕ,ಆಡಳಿತ ಅಧಿಕಾರಿ ರಾಧಾಕೃಷ್ಣ ಎರುಂಬು, ಪ್ರಾಂಶುಪಾಲ ಜಯರಾಮ ರೈ ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಶಿಕ್ಷಕ -ಶಿಕ್ಷಕೇತರರು ಉಪಸ್ಥಿತರಿದ್ದರು. ಸಹ ಶಿಕ್ಷಕಿಯರಾದ ಜಯಶ್ರೀ ಸ್ವಾಗತಿಸಿ, ಸೌಮ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. “ಕನ್ನಡ ಸಾಹಿತ್ಯ ಸಂಭ್ರಮ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮಕ್ಕೆ ಮೆರುಗು ಕೊಟ್ಟಿತು.