ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊಡೆತ ಉಂಟಾಗಿಲ್ಲ: ಡಿ.ಕೆ.ಶಿವಕುಮಾರ್
ಪುತ್ತೂರು : ರೈತರ ಜಮೀನಿನ ಪಹಣಿಯ 11 ನೇ ಕಾಲಂ ನಲ್ಲಿ ವಕ್ಫ್ ಹೆಸರು ಬಂದಿರುವ ವಿಚಾರಕ್ಕೆ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣಕ್ಕೆ ರೈತರನ್ನ ಬಲಿ ಪಡೆದುಕೊಳ್ಳುತ್ತಿದೆ ಎಂದು ಆರೋಪ ಮಾಡಿದೆ. ಆದ್ರೆ, ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಸರ್ಕಾರ ರೈತರಿಗೆ ಯಾವಾತ್ತೂ ಅನ್ಯಾಯ ಮಾಡುವುದಿಲ್ಲ. ಆದ್ರೆ, ಈ ಅನ್ಯಾಯ ಮಾಡಿದ್ದು, ಬಿಜೆಪಿ ಸರ್ಕಾರವಾಗಿದ್ದು, ಅವರ ಅವಧಿಯಲ್ಲೇ ಇದು ನಡೆದಿತ್ತು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಸಚಿವ ಎಂ.ಬಿ. ಪಾಟೀಲ್ ಅವರು ದಾಖಲೆ ಸಮೇತ ಮಾಧ್ಯಮಗಳಿಗೆ ವಿವರ ನೀಡಿದ್ದಾರೆ. ಆದ್ರೆ, ಬಿಜೆಪಿ ತನ್ನ ತಪ್ಪನ್ನು ಮುಚ್ಚಿ ಹಾಕಲು ಸರ್ಕಾರದ ವಿರುದ್ಧ ಸಂಚು ರೂಪಿಸಿದೆ. ಈ ಮೂಲಕ ಕೋ*ಮು ದ್ವೇ*ಷವನ್ನು ಹರಡಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಶಕ್ತಿ ಯೋಜನೆ ನಿಲ್ಲಿಸಲಾಗುತ್ತಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದ ಡಿಸಿಎಂ ಯಾವುದೇ ಕಾರಣಕ್ಕೂ ಗ್ಯಾರೆಂಟಿಗಳು ನಿಲ್ಲೋದಿಲ್ಲ. ಕಾಂಗ್ರೆಸ್ ಯಾವುದೇ ಯೊಜನೆ ಮಾಡಿದ್ರೆ ಅದು ಜನರ ಬದುಕಿನ ಯೋಜನೆಯಾಗಿರುತ್ತದೆ. ಆದ್ರೆ, ಬಿಜೆಪಿ ಜನರ ಭಾವನೆಗಳ ಜತೆ ಆಟ ಆಡಿ ನಮ್ಮ ಯೋಜನೆಯನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ. ಯಾವಾಗ ನಮ್ಮ ಯೋಜನೆಗಳು ನಿಲ್ಲುವುದಿಲ್ಲ ಅಂತ ಗೊತ್ತಾಗಿದೆಯೋ ಈಗ ಚುನಾವಣೆಯಲ್ಲಿ ನಮ್ಮನ್ನು ಕಾಪಿ ಮಾಡ್ತಾ ಇದ್ದಾರೆ.
ಇದು ರಾಜ್ಯ ಬಿಜೆಪಿ ನಾಯಕರಿಗೆ ಮುಜುಗರ ತಂದಿದ್ದು, ಸುಳ್ಳು ಸುದ್ದಿ ಹರಡಿಸ್ತಾ ಇದ್ದಾರೆ ಎಂದು ಹೇಳಿದ್ದಾರೆ. ರಾಜ್ಯದ ಆರ್ಥಿಕತೆ ದೇಶದ ಆರ್ಥಿಕತೆಗಿಂತಲೂ ಬಲಯುತವಾಗಿದ್ದು, ಗ್ಯಾರೆಂಟಿಯಿಂದ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊಡೆತ ಉಂಟಾಗಿಲ್ಲ ಎಂದು ಹೇಳಿದ್ದಾರೆ.




