ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ, ಸಂಘಟಕ ರೊನಾಲ್ಡ್ ಮಾರ್ಟಿಸ್ ಅವರಿಗೆ ಎಂ.ಫ್ರೆಂಡ್ಸ್ ನಿಂದ ಸನ್ಮಾನ
ದುಬೈನಲ್ಲಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ, ಸಾವಿರಾರು ಜನರಿಗೆ ಉದ್ಯೋಗ ನೀಡಿ ಪೋಷಿಸುತ್ತಿರುವ ಯುಎಇಯ ಬ್ಲೂ ರಾಯಲ್ ಗ್ರೂಪ್ ಆಫ್ ಕಂಪೆನಿಯ ಮಾಲಕ ರೊನಾಲ್ಡ್ ಮಾರ್ಟಿಸ್ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು, ಶುಕ್ರವಾರ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಮೆಲ್ಕಾರ್ ರಿಫಾಯಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಕಾರುಣ್ಯ ಯೋಜನೆಯ ಪೋಷಕರಲ್ಲೋರ್ವರೂ ಆಗಿರುವ ರೊನಾಲ್ಡ್ ಮಾರ್ಟಿಸ್ ಅವರನ್ನು ಎಂ.ಫ್ರೆಂಡ್ಸ್ ಕಾರ್ಯಾಧ್ಯಕ್ಷ ಸುಜಾಹ್ ಮಹಮ್ಮದ್ ಅಧ್ಯಕ್ಷತೆಯಲ್ಲಿ ಗೌರವಿಸಲಾಯಿತು. ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ಅಭಿನಂದನಾ ಮಾತನ್ನಾಡಿದರು. ಪೂರ್ವಾಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ, ಉಪಾಧ್ಯಕ್ಷರಾದ ವಿ.ಎಚ್. ಅಶ್ರಫ್, ಅಬೂಬಕರ್ ಪುತ್ತು ಉಪ್ಪಿನಂಗಡಿ ಹಾಗೂ ಡಾ. ಮುಬಶ್ಶಿರ್, ಪ್ರಧಾನ ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಜೊತೆ ಕಾರ್ಯದರ್ಶಿ ಶೇಕ್ ಇಸಾಕ್ ಹಾಗೂ ಅನ್ವರ್ ಹುಸೈನ್ ಗೂಡಿನಬಳಿ, ಕೋಶಾಧಿಕಾರಿ ಝುಬೈರ್ ಡ್ರೀಮ್, ಮಹಮ್ಮದ್ ಶರೀಫ್ ಮೂಡಬಿದ್ರೆ, ಕಲಂದರ್ ಪರ್ತಿಪಾಡಿ ಉಪಸ್ಥಿತರಿದ್ದರು.




