ತೌಸಿಪಾಳ ಚಿಕಿತ್ಸೆಗೆ ಕನ್ಯಾನ ದುಲ್ ಫುಖಾರ್ ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕ ಧನ ಸಹಾಯ

ವಿಟ್ಲ: ತೀವ್ರವಾದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ತೌಸೀಬ ಎಂಬ ಹುಡುಗಿಯ ಹೆಚ್ಚಿನ ಚಿಕಿತ್ಸೆಗಾಗಿ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ವತಿಯಿಂದ 2,17,500 ರೂಪಾಯಿ ವಿತರಿಸಲಾಯಿತು.
ಕಳೆದ ಎರಡು ತಿಂಗಳುಗಳಿಂದ ಆಸ್ಪತ್ರೆಯಲ್ಲಿರುವ ತೌಸೀಬಾಳ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು ಈ ಸಹಾಯಧನವನ್ನು ನೀಡಲಾಗಿದೆ
ಈ ಸಂದರ್ಭದಲ್ಲಿ ಕನ್ಯಾ ನ ಜಮಾಅತ್ ಮುದರ್ರಿಸ್ ಇಬ್ರಾಹಿಂ ಫೈಝಿ, ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬಾಲ್ರ್ತ್ರೋಡಿ, ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ, ಹಾಜಿ ಎಂ.ಕೆ ಮುಹಮ್ಮದ್ ಕುಂಞ, ದುಲ್ ಫುಖಾರ್ ಪಧಿಕಾರಿಗಳು, ಗಲ್ಫ್ ಕಮಿಟಿ ಸದಸ್ಯರು ಹಾಗೂ ಜಮಾಅತರು ಉಪಸ್ಥಿತರಿದ್ದರು.
ಕನ್ಯಾನ ಪರಿಸರದಲ್ಲಿ ಬಡ ಮತ್ತು ಅನಾಥರ ಸೇವೆಗೆಯುತ್ತಾ ಶೈಕ್ಷಣಿಕ ಹಾಗೂ ಆರೋಗ್ಯ ರಂಗದಲ್ಲಿ ಸದಾ ಸಮಯ ಸಹಾಯಧನಗಳನ್ನು ನೀಡಲಾಗುತ್ತಿದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದು ನಿರಂತರವಾಗಿ ಮದ್ದು ಸೇವಿಸುತ್ತಿರುವ 10 ಕುಟುಂಬಗಳಿಗೆ ಪ್ರತಿ ತಿಂಗಳು ದನ ಸಹಾಯವನ್ನು ಈ ಸಂಘಟನೆ ನೀಡುತ್ತಾ ಬರುತ್ತಿದೆ. ಬೆಳ್ಳಿ ಹಬ್ಬದ ಹೊಸ್ತಿಲಲ್ಲಿದ್ದು ಸದಾ ಸಮಯ ಸಮಾಜ ಮುಖಿ ಕಾರ್ಯಗಳಲ್ಲಿ ಮಿಂಚುತ್ತಿರುವ ಸಂಘಟನೆಗೆ 2024-25 ನೇ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.