ಪಟಾಕಿ ಅವಘಡ: ಗಾಯಗೊಂಡವರ ಸಂಖ್ಯೆ 29ಕ್ಕೆ ಏರಿಕೆ
ಬೆಂಗಳೂರು: ಬೆಂಗಳೂರಿನಲ್ಲಿ ಸಾಲು ಸಾಲು ಪಟಾಕಿ ಅವಘಡಗಳು ಸಂಭವಿಸಿದ್ದು, ನಿನ್ನೆ ರಾತ್ರಿಯಿಂದ ಪಟಾಕಿ ಅವಘಢದಿಂದ ಗಾಯಗೊಂಡವರ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ.
ಪಟಾಕಿ ಹಚ್ಚಲು ಹೋಗಿ ಮಕ್ಕಳು ಸೇರಿದಂತೆ 29 ಮಂದಿ ಗಾಯಗೊಂಡಿದ್ದು, ಕಣ್ಣು ಸೇರಿ ದೇಹದ ಹಲವು ಭಾಗಗಳಿಗೆ ಗಾಯಗಳಾಗಿದೆ. ಗಾಯಗೊಂಡವರಿಗೆ ಮಿಂಟೋ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿದು ಈವರೆಗೆ 29 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಟಾಕಿ ಸಿಡಿಸುವಾಗ ಹಾಗೂ ಬೇರೆಯವರು ಪಟಾಕಿ ಸಿಡಿಸುವುದನ್ನು ಸಮೀಪದಲ್ಲಿ ನಿಂತು ಹಲವರ ಕಣ್ಣಿಗೆ ಗಾಯಗಳಾಗಿವೆ. ಗಾಯಗೊಂಡ ಮೂವರು ಮಕ್ಕಳ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಿಂಟೋ ಆಸ್ಪತ್ರೆಯಲ್ಲಿ 5 ವರ್ಷದ ಬಾಲಕ ಮತ್ತು 18 ವರ್ಷದ ಯುವಕ ಸೇರಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ 3 ವರ್ಷದ ಹೆಣ್ಣು ಮಗುವಿನ ಕಣ್ಣಿಗೆ ತಾಗಿ ಕಾರ್ನಿಯಾಗೆ ಹಾನಿಯಾಗಿದೆ ಎನ್ನಲಾಗಿದೆ.