ಸೂರಿಲ್ಲದವರಿಗೆ ಆಸರೆಯಾದ ಮೊಹಮ್ಮದ್ ಕುಕ್ಕುವಳ್ಳಿ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಪುತ್ತೂರು: ನಾಳೆ ನಡೆಯಲಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಬಡವರ ಬಂಧು, ಉದ್ಯೋಗವಿಲ್ಲದ ನೂರಾರು ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟ, ಸೂರಿಲ್ಲದವರಿಗೆ ಆಸರೆ ಎಂಬ ಯೋಜನೆಯ ಮೂಲಕ ನೂರಾರು ಬಡ ಕುಟುಂಬಗಳ ಕಣ್ಣೀರನ್ನು ಒರೆಸಿದ, ಕರುಣಾಮಯಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗಳು ಅರ್ಹರಿಗೆ ಸಲ್ಲಬೇಕು. ನಾಡು ನುಡಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ, ಸಮಾಜಮುಖಿ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡಿರುವ ಮಹಮ್ಮದ್ ಹಾಜಿಯವರ ಸೇವೆಯನ್ನು ಮನಗಂಡು ಪ್ರಶಸ್ತಿ ನೀಡಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ ಕೃಷ್ಣೇಗೌಡರ್ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.