November 22, 2024

ರಸ್ತೆ ಬದಿಯ ಮೊಮೊಸ್ ಸೇವಿಸಿದ ಓರ್ವ ಮಹಿಳೆ ಮೃತ್ಯು: 20 ಮಂದಿಗೆ ಹೊಟ್ಟೆ ನೋವು, ವಾಂತಿ ಭೇದಿ, ಆಸ್ಪತ್ರೆಗೆ ದಾಖಲು

0

ಹೈದರಾಬಾದ್: ರಸ್ತೆ ಬದಿಯ ಸ್ಟಾಲ್ ಒಂದರಲ್ಲಿ ಮೊಮೊಸ್ ಸೇವಿಸಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು ಇಪ್ಪತ್ತು ಮಂದಿ ಅಸ್ವಸ್ಥರಾಗಿರುವ ಘಟನೆ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಸೋಮವಾರ ನಡೆದಿರುವುದಾಗಿ ವರದಿಯಾಗಿದೆ.

ಬಂಜಾರಾ ಹಿಲ್ಸ್ ನ ನಂದಿನಗರದಲ್ಲಿರುವ ರಸ್ತೆ ಬದಿಯ ಫುಡ್ ಸ್ಟಾಲ್ ನಲ್ಲಿ ಕಳೆದ ಶುಕ್ರವಾರ ಹಲವು ಮಂದಿ ಮೊಮೊಸ್ ಸವಿದಿದ್ದಾರೆ ಇದಾದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಪರಿಣಾಮ ಓರ್ವ ಮಹಿಳೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ,

ಉಳಿದ ಇಪ್ಪತ್ತು ಮಂದಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಕುರಿತು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಆಹಾರ ಮಳಿಗೆ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಲ್ಲದೆ ಘಟನೆಗೆ ಸಂಬಂಧಿಸಿ ಸ್ಥಳೀಯ ನಾಗರಿಕ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆಸ್ಪತ್ರೆಗೆ ದಾಖಲಿಗಿದ್ದ ಹೆಚ್ಚಿನವರು ಹೊಟ್ಟೆ ನೋವು, ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!